×
Ad

ಚಾಮರಾಜನಗರ: ಶಾಸಕರಿಂದ ರಸ್ತೆ, ಚರಂಡಿ ಅಭಿವೃದ್ದಿ ಕಾಮಗಾರಿಗೆ ಚಾಲನೆ

Update: 2018-02-13 23:03 IST

ಚಾಮರಾಜನಗರ, ಫೆ.13: ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿಶೆಷ ಯೋಜನೆಗಳಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆ ಡಾಂಬರೀಕರಣ ಹಾಗೂ ಒಳಚರಂಡಿ ಕಾಮಗಾರಿಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.

ಮೊದಲಿಗೆ ತಾಲೂಕಿನ ರಾ.ಹೆ. ವೆಂಕಟಯ್ಯನ ಛತ್ರ ಗ್ರಾಮದಿಂದ ಗ್ರಾಮ ಪರಿಮಿತಿಯೊಳಗೆ ಬಿಸಿಲವಾಡಿಗೆ ಹೋಗುವ ರಸ್ತೆ ಅಭಿವೃದ್ದಿಗೆ ಲೋಕೋಪಯೋಗಿ ಇಲಾಖೆ ವತಿಯಿಂದ ವಿಶೇಷ ಘಟಕ ಯೋಜನೆಯಡಿ 90 ಲಕ್ಷರೂ ವೆಚ್ಚದಲ್ಲಿ ಹಾಗೂ ಯಾನಗಹಳ್ಳಿ ಮುಖ್ಯ ರಸ್ತೆಯಿಂದ ಕೋತ್ತಲವಾಡಿಗೆ ಹೋಗುವ ಗ್ರಾಮ ಪರಿಮಿತಿಯೊಳಗೆ 90 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು.

ನಂತರ ಕಾವೇರಿ ನೀರಾವರಿ ನಿಗಮದಿಂದ ಬಸವಾಪುರ ಗ್ರಾಮದ ಪ.ಪಂಗಡದ ನಾಯಕರ ಕಾಲೋನಿಯಲ್ಲಿ 25.25 ಲಕ್ಷರೂ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ, ಹರದನಹಳ್ಳಿಯ ಪ.ಪಂಗಡದ ನಾಯಕರ ಕಾಲೋನಿಯಲ್ಲಿ 20 ಲಕ್ಷರೂ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಿದ್ದು, ಗ್ರಾಮೀಣ ಜನರ ಆಶಯಕ್ಕೆ ಪೂರಕವಾಗಿ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗುತ್ತಿದ್ದು, ಉತ್ತಮ ಸಾರಿಗೆ-ಸಂಪರ್ಕಕ್ಕೆ ಸಾಧ್ಯವಾಗುತ್ತದೆ. ಈ ಮೂಲಕ ರೈತರಿಗೆ ಹಾಗೂ ಜನಸಾಮಾನ್ಯರ ಓಡಾಡಕ್ಕೆ ಅನುಕೂಲವಾಗುವುದರ ಜೊತೆಗೆ ಗ್ರಾಮಗಳು ಸಹ ಅಭಿವೃದ್ದಿಯಾಗುತ್ತದೆ.

ಜಿ.ಪಂ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ಸರ್ಕಾರಗಳು ರಸ್ತೆ, ಚರಂಡಿ, ವಸತಿ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಹೆಚ್ಚು ಒತ್ತು ನೀಡಿ ವಿಶೇಷ ಅನುದಾನಗಳನ್ನು ನೀಡುತ್ತಿದೆ. ಶಾಸಕ ಸಿ.ಪುಟ್ಟರಂಗಶೆಟ್ಟಿ ವಿಶೇಷ ಕಾಳಜಿ ವಹಿಸಿ ಕ್ಷೇತ್ರಾದ್ಯಂತ ಸಂಚರಿಸಿ ಜನರ ಕುಂದುಕೊರತೆ ಆಲಿಸಿ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿದ್ದು, ಒಟ್ಟಾರೆ ಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ದಿ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ನಾಗರೀಕರು ಸಹ ಸರ್ಕಾರದ ಸವಲತ್ತುಗಳನ್ನು ಸದ್ಭಳಕೆ ಮಾಡಿಕೊಂಡು ಮುಖ್ಯವಾಹಿನಿಗೆ ಬರಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಉಪಾಧ್ಯಕ್ಷ ಪುರುಷೋತ್ತಮ್, ತಾ.ಪಂ ಸದಸ್ಯರಾದ ಮಹದೇವಶೆಟ್ಟಿ, ಪುಟ್ಟಸ್ವಾಮಿ, ಕಾಂತಮಣಿ ಮಹೇಶ್, ದೊಡ್ಡಮ್ಮ ಗ್ರಾ.ಪಂ ಅಧ್ಯಕ್ಷರಾದ ಸೋಮಣ್ಣ, ಮಹದೇವಯಯ್ಯ, ಸುಬ್ದಶೆಟ್ಟಿ, ಉಪಾಧ್ಯಕ್ಷರಾದ ಸಿದ್ದರಾಜು, ಚಿಕ್ಕಮಣಿ, ಗ್ರಾ.ಪಂ ಮಾಜಿ ಅಧ್ಯಕ್ಷ ಶಮಿತ್‍ಕುಮಾರ್, ಮುಖಂಡರಾದ ಕೊತ್ತಲವಾಡಿ ಸೋಮಲಿಂಗಪ್ಪ, ಸುಂದರಾಜು, ವೆಂಕಟೇಶ್, ಕೃಷ್ಣ, ನರಸನಾಯಕ, ಪುಟ್ಟರಂಗನಾಯಕ, ರಂಗಸ್ವಾಮಿ, ವೆಂಕಟರಮಣನಾಯಕ, ಶ್ರೀನಿವಾಸ್, ತಮ್ಮಣ್ಣನಾಯಕ, ರಾಜೇಂದ್ರ, ಎಇಇ ರಾಜೇಂದ್ರ ಪ್ರಸಾದ್, ಎಇ ಮಹೇಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News