ಹನೂರು: ಅರಿಶಿಣದ ಆನ್‍ಲೈನ್ ವಹಿವಾಟಿಗೆ ಸಂಸದರಿಂದ ಚಾಲನೆ

Update: 2018-02-14 17:27 GMT

ಹನೂರು,ಫೇ.14: ಇಡೀ ದೇಶದಲ್ಲಿ ಪ್ರಥಮ ಭಾರಿಗೆ ರೈತರಿಗೆ ಅನುಕೂಲವಾಗವ ದೃಷ್ಟಿಯಿಂದ ಅರಿಶಿನ ಬೆಳೆಯನ್ನು ಗಣಿಕೀಕರಣದ ಆನ್‍ಲೈನ್ ಖರೀದಿ ವ್ಯವಸ್ಥೆಯನ್ನು ಜಾರಿಗೂಳಿಸಿದ್ದು ಸಿದ್ದರಾಮಯ್ಯನವರ ಸರ್ಕಾರ ಎಂದು ಸಂಸದ ಧ್ರುವನಾರಾಯಣ್ ತಿಳಿಸಿದರು.

ಹನೂರು ಪಟ್ಟಣದ ಎಪಿಎಂಸಿ ಪ್ರಾಂಗಣದ ಕಚೇರಿಯಲ್ಲಿ ಅರಿಶಿಣವನ್ನು ಆನ್‍ಲೈನ್ ಮೂಲಕ ವ್ಯಾಪಾರ ವಹಿವಾಟು ಮಾಡಲು ಚಾಲನೆ ನೀಡಿ ಮಾತನಾಡಿದ ಅವರು, ಭಾರತ ದೇಶದ ಯಾವುದೇ ಎಪಿಎಂಸಿಗಳಲ್ಲಿ ಈ ಆನ್‍ಲೈನ್ ಖರೀದಿ ವ್ಯವಸ್ಥೆ ಇಲ್ಲ. ಮೊದಲ ಬಾರಿಗೆ ಕರ್ನಾಟಕದಲ್ಲಿ ಈ ಆನ್‍ಲೈನ್ ವ್ಯವಸ್ಥೆಯನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ ಎಂದರು.

ಹಿಂದಿನ ಯುಪಿಎ ಸರ್ಕಾರ ಆಡಳಿತದಲ್ಲಿ ಅರಿಶಿನ ಬೆಲೆ ಕುಸಿತಗೊಂಡಾಗ ರೈತರ ಅನುಕೂಲಕ್ಕಾಗಿ ಮೊದಲ ಬಾರಿ ಮಾಜಿ ಕೃಷಿ ಸಚಿವ ಕೇಂದ್ರ ಶರತಪವರ್ ರೈತರು ಬೆಳೆದ ಅರಿಶಿಣಕ್ಕೆ 5050ರೂ. ಬೆಂಬಲ ಬೆಲೆ ನಿಗದಿ ಪಡಿಸಿ, ಚಾಮರಾಜನಗರದಲ್ಲಿ ಖರೀದಿ ಕೇಂದ್ರ ಆರಂಭಿಸಿದರು. ನಂತರ ಈಗ ಸಿದ್ದರಾಮಯ್ಯ ರಾಜ್ಯ ಸರ್ಕಾರ ರೈತಾಪಿ ವರ್ಗದ ಅನುಕೂಲಕ್ಕಾಗಿ ಕೃಷಿ ಉತ್ಪನ್ನ ಉಪ ಮಾರಕಟ್ಟೆಗಳಲ್ಲಿ ಮೊದಲ ಬಾರಿಗೆ ಆನ್‍ಲೈನ್ ಮೂಲಕ ಅರಿಶಿನ ಖರೀದಿ ಕೇಂದ್ರ ತೆರೆಯಲಾಗಿದೆ. ಈ ಭಾಗದಲ್ಲಿ ರೈತರು ಹೆಚ್ಚಾಗಿ ಅರಿಶಿನ ಬೆಳೆ ಬೆಳೆಯುತ್ತಿದ್ದಾರೆ, ಈ ವ್ಯವಸ್ಥೆಯನ್ನು ರೈತರು ಸದ್ಬಳಕೆ ಮಾಡಿಕೊಳ್ಳಲಿ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಶಾಸಕ ಆರ್.ನರೇಂದ್ರರಾಜೂಗೌಡ, ತಾಲೂಕು ಪಂಚಾಯತ್ ಅಧ್ಯಕ್ಷ ರಾಜು, ಜಿ.ಪಂ ಸದಸ್ಯ ಬಸವರಾಜು, ಪಪಂ ಅಧ್ಯಕ್ಷೆ ಮಮತಾ, ಉಪಾಧ್ಯಕ್ಷ ಬಸವರಾಜು, ಮಾಜಿ ಅದ್ಯಕ್ಷ ರಾಜೂಗೌಡ, ಎಪಿಎಂಸಿ ನಿರ್ದೇಶಕ ಮಾದೇಶ್, ಎಪಿಎಂಸಿ ಕಾರ್ಯದರ್ಶಿ ಡಿಆರ್ ಪುಷ್ಪಾ ಸಹಾಯಕ ನಿರ್ದೇಶಕ ಶಿವುಕುಮಾರ್ ಮುಖಂಡರಾದ ಚಿಕ್ಕತಮ್ಮೆಗೌಡ ಇನ್ನಿತರರು ಹಾಜರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News