ಮೈಸೂರು: ಪ್ರಧಾನಿ ಮೋದಿ ಆಗಮನದ ಹಿನ್ನಲೆ; ಸ್ಥಳ ಪರಿಶೀಲನೆ ನಡೆಸಿದ ಎಸ್.ಪಿ.ಜಿ ತಂಡ

Update: 2018-02-14 17:51 GMT

ಮೈಸೂರು,ಫೆ.14: : ಮೈಸೂರಿಗೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಭೇಟಿ ಹಿನ್ನಲೆಯಲ್ಲಿ ಎಸ್.ಪಿ.ಜಿ. ತಂಡ ಮೈಸೂರಿಗೆ ಭೇಟಿ ನೀಡಿ ಭದ್ರತೆ ಪರಿಶೀಲನೆ ನಡೆಸಿತು.

ಎಸ್.ಪಿ.ಜಿ. ಎಐಜಿಪಿ ಸೋಮಯತಿರಾಯ್ ನೇತೃತ್ವದಲ್ಲಿ ಪರಿಶೀಲನೆ ನಡೆದಿದ್ದು, ಜಿಲ್ಲಾಧಿಕಾರಿ ಡಿ.ರಂದೀಪ್, ಪಾಲಿಕೆ ಅಧಿಕಾರಿಗಳು, ಡಿಸಿಪಿಗಳಾದ ವಿಕ್ರಂ ಆಮಟೆ,ವಿಷ್ಣುವರ್ಧನ್ ಸೇರಿ 45 ಅಧಿಕಾರಿಗಳು ಸ್ಥಳ ಪರೀಶೀಲನೆ ನಡೆಸಿದರು. ಮೈಸೂರಿನ ಲಲಿತ್ ಮಹಲ್ ಹೆಲಿಪ್ಯಾಡ್, ಜೆ. ಕೆ ಗ್ರೌಂಡ್ , ರೈಲ್ವೆ ನಿಲ್ದಾಣ, ಹಾಗೂ ಮಹಾರಾಜ ಕಾಲೇಜು ಮೈದಾನದಲ್ಲಿ ಭದ್ರತೆಯ ಪರಿಶೀಲನೆಯನ್ನು ನಡೆಸಲಾಯಿತು.  

ಫೆ.18 ರಂದು ರಾತ್ರಿ ವಿಶೇಷ ವಿಮಾನದಲ್ಲಿ ಮೋದಿ ಮೈಸೂರಿಗೆ ಆಗಮಿಸಲಿದ್ದು, ಲಲಿತ್ ಮಹಲ್ ಪ್ಯಾಲೇಸ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಫೆ.19ರ ಬೆಳಿಗ್ಗೆ 10.30 ಕ್ಕೆ ವಿಡಿಯೋ ಸಂವಾದ ನಡೆಸಿದ ಬಳಿಕ 12.30ಕ್ಕೆ ವಿಶೇಷ ಹೆಲಿಕಾಪ್ಟರ್ ಮೂಲಕ ಶ್ರವಣಬೆಳಗೊಳಕ್ಕೆ ಭೇಟಿ ನೀಡಲಿದ್ದು, ಬಳಿಕ ಶ್ರವಣ ಬೆಳಗೊಳದಿಂದ 3 ಗಂಟೆಗೆ ಹೊರಟು ಮೈಸೂರಿನ ಜೆ.ಕೆ.ಮೈದಾನದಲ್ಲಿ ಬಂದಿಳಿಯಲಿದ್ದಾರೆ.

ಜೆ.ಕೆ ಮೈದಾನದಿಂದ ಕಾರಿನಲ್ಲಿ ರೈಲ್ವೆ ಸ್ಟೇಷನ್ ಗೆ ತೆರಳಲಿದ್ದು, ರೈಲ್ವೆ ನಿಲ್ದಾಣದಲ್ಲಿ  ಜೋಡಿ ಎಲೆಕ್ಟಿಕಲ್ ಟ್ರೈನ್ ಉದ್ಘಾಟಿಸಲಿದ್ದಾರೆ.ನಂತರ ಷಟ್ಪಥ ರೈಲು ಮಾರ್ಗಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ ಮಹಾರಾಜ ಕಾಲೇಜು ಮೈದಾನದಲ್ಲಿ ಬಹಿರಂಗ ಸಭೆಯಲ್ಲಿ ಭಾಷಣ ಮಾಡಲಿದ್ದು, ಸಂಜೆ 4.30 ಕ್ಕೆ ವಿಶೇಷ ವಿಮಾನದ ಮೂಲಕ ಬೆಂಗಳೂರು ತಲುಪಲಿದ್ದಾರೆ ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News