ತೋಟಗಾರಿಕಾ ಇಲಾಖೆಗೆ 995 ಕೋಟಿ ರೂ.ಅನುದಾನ

Update: 2018-02-16 15:32 GMT

ಬೆಂಗಳೂರು, ಫೆ.16: ತೋಟಗಾರಿಕಾ ಇಲಾಖೆಗೆ 2018-19ನೆ ಸಾಲಿನ ಆಯವ್ಯಯದಲ್ಲಿ ಒಟ್ಟಾರೆ 995 ಕೋಟಿ ರೂ.ಅನುದಾನ ಒದಗಿಸಲಾಗಿದೆ.

* ತೋಟಗಾರಿಕಾ ಬೆಳೆಗಳ ಸಮಗ್ರ ಪೀಡೆ ಮತ್ತು ಪೋಷಕಾಂಶ ನಿರ್ವಹಣೆಗಾಗಿ ರೈತರಿಗೆ ನೆರವು ನೀಡಲು ಪ್ರಸಕ್ತ ಸಾಲಿಗೆ 10ಕೋಟಿ ರೂ.ನೀಡಲಾಗುವುದು.

* ನಗರ ಮತ್ತು ನಗರಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟೊಮ್ಯಾಟೋ, ದಪ್ಪ ಮೆಣಸಿನಕಾಯಿ, ಬದನೆ ಮತ್ತು ಸೊಪ್ಪು-ತರಕಾರಿ ಬೆಳೆಗಳನ್ನು ಬೆಳೆಯಲು ಹೈಡ್ರೋಫೋನಿಕ್ಸ್ ತಂತ್ರಜ್ಞಾನದ ಉಪಯೋಗವನ್ನು ಉತ್ತೇಜಿಸಲಾಗುವುದು.

* ಕೇಂದ್ರ ಪುರಸ್ಕೃತ ಹಾಗೂ ರಾಜ್ಯವಲಯ ಯೋಜನೆಗಳಡಿ ಅಪರೂಪದ ಹಣ್ಣುಗಳಾದ ಫ್ಯಾಷನ್ ಹಣ್ಣು, ರಾಂಬೂತಾನ್, ದುರಿಯನ್, ಡ್ರಾಗನ್ ಹಣ್ಣು, ಲಿಚ್ಚಿ, ಆಪಲ್‌ಬರ್, ಸ್ಟ್ರಾಬೆರಿ ಇತ್ಯಾದಿ ಹೊಸ ಬೆಳೆಗಳನ್ನು ಬೆಳೆಯಲು ಉತ್ತೇಜನ.

* ತೆಂಗು ಬೆಳೆಗಾರರ ಹಿತದೃಷ್ಟಿಯಿಂದ ಮುಂದಿನ 5 ವರ್ಷಗಳಲ್ಲಿ ಸಮಗ್ರ ಕೀಟ, ರೋಗ ಮತ್ತು ಪೋಷಕಾಂಶಗಳ ನಿರ್ವಹಣೆ ಮತ್ತು ಮರುನಾಟಿ ಮೂಲಕ ಈ ತೋಟಗಳನ್ನು ಪುನಶ್ಚೇತಗೊಳಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News