ನನ್ನ ಅಧಿಕಾರದ ಅವಧಿಯಲ್ಲಿ 1200ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದ್ದೇನೆ: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

Update: 2018-02-17 17:18 GMT

ಬಾಗೇಪಲ್ಲಿ,ಫೆ17: ನನ್ನ ಅಧಿಕಾರದ 5 ವರ್ಷದ ಅವಧಿಯಲ್ಲಿ ಸುಮಾರು 1200ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿ ಅಭಿವೃದ್ದಿ ಮಾಡಿದ್ದೇನೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ತಾಲೂಕಿನ ಗೂಳೂರು ಗ್ರಾಮದ  ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘದ ಆವರಣದಲ್ಲಿ ಏರ್ಪಡಿಸಿದ್ದ ಗೂಳೂರು ಮತ್ತು ಆಚೇಪಲ್ಲಿ ರೈತರಿಗೆ  ಸುಮಾರು 1ಕೋಟಿ 20 ಲಕ್ಷ ರೂ.ಗಳ ಸಾಲ ವಿತರಣೆ ಮಾಡಿ ಮಾತನಾಡಿದ ಅವರು, ಈ ತಾಲೂಕಿನಲ್ಲಿ ಸಾಧ್ಯವಾದಷ್ಟು ರಸ್ತೆಗಳ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದ್ದೇನೆ, ಎಲ್ಲೋ ಕೆಲವು ಕಡೆ ರಸ್ತೆಗಳು ಸರಿ ಇಲ್ಲದಿರಬಹುದು, ಅದನ್ನೇ ನೆಪವಾಗಿ ಇಟ್ಟುಕೊಂಡು ಯಾರೋ ಇತ್ತೀಚಿಗೆ ಮುಖಂಡರೊಬ್ಬರು ಬಾಗೇಪಲ್ಲಿ ತಾಲೂಕಿನ ಬಹುತೇಕ ರಸ್ತೆಗಳು ಹಳ್ಳ ಮತ್ತು ಗುಣಿಗಳಿಂದ ಕೂಡಿದೆ, 1200 ಕೋಟಿ ತಂದಿದ್ದೇನೆಂದು ಹೇಳಿಕೊಳ್ಳುತ್ತಿದ್ದಾರೆ, ಎಲ್ಲಿ ಖರ್ಚು ಮಾಡಿದ್ದಾರೆ ತೋರಿಸಲಿ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. 1200ಕೋಟಿ ರೂ.ಗಳ ಬಗ್ಗೆ ಅತಿ ಶೀಘ್ರದಲ್ಲಿಯೇ ಪುಸ್ತಕ ಬಿಡುಗಡೆ ಮಾಡಿ ನನ್ನ ವಿರುದ್ದ ಅಪಪ್ರಚಾರದಲ್ಲಿ ತೊಡಗಿರುವ ಮುಖಂಡನ ಮನೆಗೆ ಕಳಹಿಸಿಕೊಂಡುತ್ತೇನೆ ಎಂದು ಪರೋಕ್ಷವಾಗಿ ಜೆಡಿಎಸ್ ಪಕ್ಷದ ಡಿ.ಜೆ ನಾಗರಾಜರೆಡ್ಡಿಗೆ ತಿರುಗೇಟು ನೀಡಿದರು.

ನಮ್ಮ ಕಾಂಗ್ರೆಸ್ ಸರ್ಕಾರ ಮಾಡಿರುವಂತಹ ಅಭಿವೃದ್ದಿ ಬೇರೆ ಯಾವುದೇ ಸರ್ಕಾರ ಮಾಡಲಿ, ಅವರಿಗೆ ನಾವು ಮತವನ್ನು ಹಾಕುತ್ತೇವೆ. ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದ ಅವರು, ನಮ್ಮ ಸರ್ಕಾರದಲ್ಲಿ ಮಹಿಳೆಯರು ಮತ್ತು ರೈತರಿಗೆ ವಿಷೇಶ ಆಧ್ಯತೆ ನೀಡಿ ಬಡ್ಡಿ ರಹಿತ ಸಾಲವನ್ನು ನೀಡುತ್ತಿದೆ. ರೈತರು ಈಗ ಪಡೆಯುತ್ತಿರುವ ಸಾಲವನ್ನು ಕೃಷಿ ಚಟುವಟಿಕೆಗಳಿಗೆ ಮಾತ್ರ ಬಳಸಬೇಕೇ ವಿನಃ ಬೇರೆ ಯಾವುದಕ್ಕೂ ಬಳಸಬೇಡಿ ಎಂದು ರೈತರಿಗೆ ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಲಕ್ಷ್ಮೀನರಸಿಂಹಪ್ಪ, ತಾ.ಪಂ ಅಧ್ಯಕ್ಷ ಕೆ.ಆರ್.ನರೇಂದ್ರಬಾಬು, ಡಿಸಿಸಿಬ್ಯಾಂಕ್ ಉಪಾದ್ಯಕ್ಷ ಹೆಚ್.ವಿ.ನಾಗರಾಜ್, ವ್ಯವಸ್ಥಾಪಕ ಚೇತನ್, ತಾ.ಪಂ ಮಾಜಿ ಅಧ್ಯಕ್ಷ ಎಸ್.ಎಸ್.ರಮೇಶ್ ಬಾಬು, ತಾ.ಪಂ ಸದಸ್ಯೆ ಈಶ್ವರಮ್ಮ ವೀರನಾರಾಯಣ, ಗ್ರಾ.ಪಂ ಅಧ್ಯಕ್ಷ ಮುನ್ನಾಖಾನ್, ಉಪಾಧ್ಯಕ್ಷ ನಾರಾಯಣ್ ನಾಯಕ್, ವಿಎಸ್ ಎಸ್ ಎನ್ ಸಂಘದ ಉಪಾಧ್ಯಕ್ಷ ಅಮರನಾರಾಯಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗಭೂಷಣ ರಾವ್, ನಿದೇರ್ಶಕರಾದ ರಾಮಯ್ಯಶೆಟ್ಟಿ, ಆವುಲಪ್ಪ, ಶ್ರೀರಾಮಪ್ಪ,ಸಿಬ್ಬಂದಿಗಳಾದ ಹರಿನಾಥ್, ಅನ್ವರ್ ಹಾಗೂ ಆಚೇಪಲ್ಲಿ ವಿ ಎಸ್ ಎಸ್ ಎನ್ ಸಂಘದ ಅಧ್ಯಕ್ಷ ನಂಜಿರೆಡ್ಡಿ, ಕಾರ್ಯದರ್ಶಿ ನಾಗರಾಜ್ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News