ದಾವಣಗೆರೆ:17ನೇ ರಾಜ್ಯ ಮಟ್ಟದ 2 ದಿನಗಳ ರಾಜ್ಯಶಾಸ್ತ್ರ ಅಧ್ಯಾಪಕರ ಸಮ್ಮೇಳನ

Update: 2018-02-17 17:25 GMT

ದಾವಣಗೆರೆ,ಫೆ.17: ಸುಸ್ಥಿರ ಭಾರತ ನಿರ್ಮಾಣಕ್ಕಾಗಿ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಕಾನೂನು ಶಾಸ್ತ್ರ ಹೀಗೆ ಹಲವಾರು ವಲಯಗಳಿದ್ದು, ಯಾವ ವಲಯ ಕಲ್ಯಾಣ ರಾಜ್ಯ ಸ್ಥಾಪನೆಗೆ ಸೂಕ್ತ ಎನ್ನುವ ಬಗ್ಗೆ ಚಿಂತನೆ ಅಗತ್ಯವಿದೆ ಎಂದು ದಾವಣಗೆರೆ ವಿಶ್ವ ವಿದ್ಯಾನಿಲಯದ ಪ್ರಭಾರಿ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಹೇಳಿದರು.

ಶನಿವಾರ ನಗರದ ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ರಾಜ್ಯ ರಾಜ್ಯಶಾಸ್ತ್ರ ಅಧ್ಯಾಪಕರ ಸಂಘ, ಐಸಿಎಸ್‍ಎಸ್‍ಆರ್ ನವದೆಹಲಿ, ಎಸ್‍ಬಿಸಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮತ್ತು ಅಥಣಿ ಸ್ನಾತಕೋತ್ತರ ಕೇಂದ್ರ, ಎ.ಆರ್.ಎಂ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ಸಂಯುಕ್ತಾಶ್ರಯದಲ್ಲಿ 17ನೇ ರಾಜ್ಯ ಮಟ್ಟದ ಎರಡು ದಿನಗಳ ರಾಜ್ಯಶಾಸ್ತ್ರ ಅಧ್ಯಾಪಕರ ಸಮ್ಮೇಳನದಲ್ಲಿ ಪ್ರಜಾಪ್ರಭುತ್ವ ಭಾರತ ಅನುಭವ ಕುರಿತು ಉಪನ್ಯಾಸಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು 

ಭಾರತ ಅಹಿಂಸೆಯಿಂದ ಸ್ವಾತಂತ್ರ್ಯ ಪಡೆದುಕೊಂಡಿದ್ದು, ಪ್ರಜಾಸತಾತ್ಮಕ ವ್ಯವಸ್ಥೆಗೆ ಹಲವಾರು ಸವಾಲುಗಳಿವೆ. ಅವುಗಳನ್ನು ಮೆಟ್ಟಿ ನಿಲ್ಲಬೇಕಾಗಿದೆ. ಇದಕ್ಕಾಗಿ ಗಾಂಧೀಜಿ, ಅಂಬೇಡ್ಕರ್, ನೆಹರು ತೋರಿಸಿಕೊಟ್ಟ ಭಿನ್ನ ಮಾರ್ಗದಲ್ಲಿ ಯಾವುದು ಸೂಕ್ತ ಎನ್ನುವ ಬಗ್ಗೆ ಚಿಂತನೆ ನಡೆಯಬೇಕಾಗಿದೆ ಎಂದ ಅವರು, 1980ರ ದಶಕದಲ್ಲಿ ಭಾರತ ಅಭಿವೃದ್ಧಿ ಪಥದ ಕಡೆ ಹೊರಳಿದಾಗ ರಾಜಕೀಯ ಶಾಸ್ತ್ರಜ್ಞರಿಗೆ ಹಲವಾರು ಸವಾಲು ಎದುರಾಗಿತ್ತು, ಮತ್ತೆ 1990ರ ಉದಾರೀಕರಣ ಹೊಸ ಸವಾಲಾಗಿತ್ತು ಎಂದು ಹೇಳಿದರು.

ಧಾರವಾಡ ಎಚ್‍ಆರ್‍ಡಿಸಿ ಕರ್ನಾಕಟ ವಿಶ್ವವಿದ್ಯಾನಿಲಯದ ನಿರ್ದೇಶಕ ಡಾ.ಹರೀಶ್ ರಾಮಸ್ವಾಮಿ ಮಾತನಾಡಿ, ಚುನಾವಣೆ ವೇಳೆ ನಡೆಯುವ ವೇಳೆ ಹಣ, ಹೆಂಡ ಹಂಚಿಕೆಯಂತಹ ಭ್ರಷ್ಟಾಚಾರಗಳು ಹಾಗೂ ಚುನಾವಣೆಗೆ ಮುಂಚೆ ನೀಡಲಾಗುವ ಆಮಿಷಗಳು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಪ್ರಜಾಪ್ರಭುತ್ವ ಇಲ್ಲವಾದಲ್ಲಿ ನಾವು ಮತ್ತಷ್ಟು ಕೆಟ್ಟ ವ್ಯವಸ್ಥೆಗೆ ತೆರಳಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರಜಾಪ್ರಭುತ್ವ ಬಲಗೊಳಿಸುವ ಅನಿವಾರ್ಯತೆ ನಮ್ಮ ಎದುರಿಗಿದೆ. ಬಲಪಂಥಿಯ ಧೋರಣೆ ಬಗ್ಗೆ ಎಚ್ಚರವಾಗಿಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಬಿಎಸ್‍ಸಿ ಪ್ರಥಮ ದರ್ಜೆ ಕಾಲೇಜು ಅಧ್ಯಕ್ಷ ಬಿ.ಸಿ.ಶಿವಕುಮಾರ್, ಕರ್ನಾಕಟ ವಿವಿ ಹಾಗೂ ಕಾಲೇಜು ಅಧ್ಯಾಪಕರ ಸಂಘದ ಮಾಜಿ ಅಧ್ಯಕ್ಷ ಪ್ರೊ.ಸಿ.ಎಚ್. ಮುರುಗೇಂದ್ರಪ್ಪ, ಬಿಎಸ್‍ಸಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಚಾರ್ಯ ಡಾ.ಕೆ.ಷಣ್ಮುಖ, ಎಆರ್‍ಎಂ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಡಿ.ಎಚ್.ಪ್ಯಾಟಿ, ಡಾ.ಬಿ.ವಿ.ವೀರಪ್ಪ, ಡಾ.ಜಾವೇದ್, ಪ್ರೊ.ಮಲ್ಲಿಕಾರ್ಜುನ ಆರ್. ಹಲಸಂಗಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News