ದಾವಣಗೆರೆ:'ಭಾರತ ಸಂವಿಧಾನ ದಿನಾಚರಣೆ’ ವಿಶೇಷ ಉಪನ್ಯಾಸ ಮಾಲಿಕೆ ಕಾರ್ಯಕ್ರಮ

Update: 2018-02-17 17:29 GMT

ದಾವಣಗೆರೆ,ಫೆ.17: ಶೋಷಿತ ವರ್ಗದವರು ಆಡಳಿತದ ಅಧಿಕಾರದಿಂದ ವಂಚಿತರಾಗಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ. ಸಾಗರ್ ಹೇಳಿದರು. 

ವಿಶ್ವವಿದ್ಯಾನಿಲದಲ್ಲಿ ಪ. ಜಾತಿ ಮತ್ತು ಪ. ಪಂಗಡದ ಅಭಿವೃದ್ಧಿ ಘಟಕದ ವತಿಯಿಂದ ಆಯೋಜಿಸಲಾಗಿದ್ದ “ಭಾರತ ಸಂವಿಧಾನ ದಿನಾಚರಣೆ’’ಯ ವಿಶೇಷ ಉಪನ್ಯಾಸ ಮಾಲಿಕೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಸದ್ಯ ಶೋಷಿತ ವರ್ಗಗಳಿಗೆ ಆಡಳಿತ ಕೊರತೆಯಿದೆ. ಆಡಳಿತ ಅಧಿಕಾರ ನೀಡಿದಲ್ಲಿ ಈ ದೇಶವನ್ನು ಸಮರ್ಥವಾಗಿ ನಿಭಾಯಿಸಬಲ್ಲರು ಎಂದ ಅವರು, ಪ್ರಸ್ತುತ ಸಂವಿಧಾನದ ಅರಿವು ವಿದ್ಯಾರ್ಥಿಗಳಲ್ಲಿ ಅಗತ್ಯವಾಗಿದೆ. ಸ್ವಾತಂತ್ರ್ಯ ಸಿಕ್ಕು 69 ವರ್ಷಗಳಾದರೂ ಸ್ವಾತಂತ್ರ್ಯದ ಬಗ್ಗೆ ಪರೀಕ್ಷೆ ಒಳಪಡಿಸುವಂತ ಕಾಲ ಎದುರಾಗಿದೆ. ಸಂವಿಧಾನದ ಮುಖಾಂತರ ನೀಡಿದ ಒಂದು ಓಟು ಒಂದು ಮೌಲ್ಯವನ್ನ ಪಡೆದಿದೆ, ಅದು ತಮ್ಮ ಕಷ್ಟಗಳನ್ನ ನಿವಾರಿಸುವಂತಹ ನಾಯಕನನ್ನು ಆಯ್ಕೆ ಮಾಡುವ ಹಕ್ಕನ್ನ ನೀಡಿದೆ ಎಂದರು.

ದಾವಣಗೆರೆ ವಿವಿಯ ಸಿಂಡಿಕೇಟ್ ಸದಸ್ಯ ವಿಶ್ವನಾಥ್ ಹೆಚ್. ಮಾತನಾಡಿ, ವಿಶ್ವದ ಎಲ್ಲಾ ಕಾನೂನು ಅರ್ಥೈಯಿಸಿಕೊಂಡು ಲಿಖಿತ ರೂಪದಲ್ಲಿ ರಚಿಸಿ ಭಾರತ ದೇಶದಲ್ಲಿ ಸಮಾನತೆ ಸುಧಾರಿಸಲು ಸಂವಿಧಾನವನ್ನು ಅಂಬೇಡ್ಕರ್ ರಚಿಸಿದರು. ಅಲ್ಲದೆ, ಮೂಲ ಹಕ್ಕುಗಳ ಜೊತೆಯಲ್ಲೆ ಮೂಲ ಕರ್ತವ್ಯ ನೀಡಿದ ರಾಷ್ಟ್ರಗಳಲ್ಲಿ ಭಾರತವೂ ಒಂದು ಎಂದರು.

ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಪ್ರೋ. ಬಿ.ಪಿ. ವೀರಭದ್ರಪ್ಪ ಮಾತನಾಡಿದರು. ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಸಚಿವ ಎಸ್.ವೈ. ಹಲಸೆ ಪರೀಕ್ಷಾಂಗ ಸಚಿವ ಗಂಗಾಧರ್ ನಾಯ್ಕ್, ಹಣಕಾಸು ಸಚಿವರಾದ ಅನಿತಾ ಹೆಚ್.ಎಸ್. ಪ. ಜಾತಿ/ ಪ. ಪಂಗಡ ಅಭಿವೃದ್ಧಿ ಘಟಕದ ಪ್ರೋ. ಲಕ್ಷಣ್ ಪಿ, ರಾಮಚಂದ್ರಪ್ಪ ಎ.ಪಿ. ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News