ಮದ್ದೂರು: ಎಎಸ್‍ಐ ಮೇಲೆ ಹಲ್ಲೆಗೆ ಯತ್ನ ಆರೋಪ; ಮೂವರ ಬಂಧನ
Update: 2018-02-17 23:37 IST
ಮದ್ದೂರು, ಫೆ.17: ತಾಲೂಕಿನ ತೊಪ್ಪನಹಳ್ಳಿ ಮುತ್ತುರಾಯಸ್ವಾಮಿ ಹರಿಸೇವೆ ಸಂದರ್ಭದಲ್ಲಿ ಎಎಸ್‍ಐ ಮೇಲೆ ಹಲ್ಲೆಗೆ ಯತ್ನ ನಡೆಸಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ.
ಯೋಗೇಶ್, ನಾಗೇಶ್ ಹಾಗೂ ಮುತ್ತುರಾಜು ಬಂಧಿತರು. ಇವರು ಕರ್ತವ್ಯನಿರತ ಎಎಸ್‍ಐ ರವಿಪ್ರಕಾಶ್‍ಗೆ ಹಲ್ಲೆ ಯತ್ನ ನಡೆಸಿದರು ಎಂದು ಆರೋಪಿಸಲಾಗಿದೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈ ಸಂಬಂಧ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.