ಸಾಲಬಾಧೆ: ಪತ್ನಿ, ಮಕ್ಕಳೊಂದಿಗೆ ಉದ್ಯಮಿ ಆತ್ಮಹತ್ಯೆ

Update: 2018-02-18 07:55 GMT

ಪುಣೆ,ಫೆ.18: ಸಾಲಬಾಧೆ ತಾಳಲಾರದೆ 38 ವರ್ಷದ ಉದ್ಯಮಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 ಪೋಕಲೆನಗರದ ಮನಾಸ್ ಅಪಾರ್ಟ್‌ಮೆಂಟ್‌ನ 2ನೇ ಮಹಡಿಯಲ್ಲಿರುವ ತನ್ನ ಫ್ಲ್ಯಾಟ್‌ನೊಳಗೆ ಉದ್ಯಮಿ ನೀಲೇಶ್ ತನ್ನ ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ನೀಲೇಶ್ ಪತ್ನಿ ನೀಲಂ(33) ತಾನು ವಿಷ ಸೇವಿಸಿದ್ದಲ್ಲದೆ, ತನ್ನ ಇಬ್ಬರು ಪುತ್ರಿಯರಾದ ಶ್ರಾವಣಿ(9) ಹಾಗೂ ಶ್ರೇಯಾಗೆ(7) ವಿಷ ಉಣಿಸಿದ್ದಾರೆ. ನೀಲೇಶ್ ಫ್ಯಾನ್‌ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯೊಳಗೆ ಸುಸೈಡ್ ನೋಟ್ ಪತ್ತೆಯಾಗಿದ್ದು, ಆರ್ಥಿಕ ಮುಗ್ಗಟ್ಟು ಹಾಗೂ ಉದ್ಯಮದಲ್ಲಿನ ನಷ್ಟ ಈ ಕೃತ್ಯಕ್ಕೆ ಕಾರಣ ಎಂದು ಪತ್ರದಲ್ಲಿ ಬರೆದಿದ್ದು, ತಮ್ಮ ಅಂಗಾಂಗವನ್ನು ದಾನ ಮಾಡುವಂತೆ ಕೇಳಿಕೊಳ್ಳಲಾಗಿದೆ.

   ಚೌಧರಿ ನಂದೇಡ್ ಫಾಟಾದಲ್ಲಿ ಪ್ಲಾಸ್ಟಿಕ್ ವೌಲ್ಡಿಂಗ್ ಉದ್ಯಮ ನಡೆಸುತ್ತಿದ್ದು, 3 ವರ್ಷಗಳ ಹಿಂದೆ ಗೃಹ ಸಾಲ ಪಡೆದು ಫ್ಲಾಟ್‌ನ್ನು ಖರೀದಿಸಿದ್ದರು. ಕಂಪೆನಿಯ ಮಿಷನ್ ಖರೀದಿಗೆ ಬ್ಯಾಂಕ್ ಸಾಲ ಪಡೆದಿದ್ದರು. ನೀಲಂ ಗೃಹಣಿಯಾಗಿದ್ದರು. ಇಬ್ಬರು ಹೆಣ್ಣುಮಕ್ಕಳು ಕಾರ್ವೆನಗರ್‌ನ ಶಾಲೆಯಲ್ಲಿ ಓದುತ್ತಿದ್ದು, ಇಬ್ಬರೂ ಓದುವುದರಲ್ಲಿ ಮುಂದಿದ್ದರು. ಶ್ರಾವಣಿ 5ನೇ ತರಗತಿ ಹಾಗೂ ಶ್ರೇಯಾ 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News