ದಾವಣಗೆರೆ: ಎಸ್.ಎಸ್.ಮಲ್ಲಿಕಾರ್ಜುನ್ ಕಾಂಗ್ರೆಸ್ ಭವನ ಉದ್ಘಾಟನೆ
Update: 2018-02-18 19:02 IST
ದಾವಣಗೆರೆ,ಫೆ.18: ದಕ್ಷಿಣ ವಲಯ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಛೇರಿ ಎಸ್.ಎಸ್.ಮಲ್ಲಿಕಾರ್ಜುನ್ ಭವನವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಉದ್ಘಾಟಿಸಿದರು.
ಭವನ ಉದ್ಘಾಟಿಸಿ ಮಾತನಾಡಿದ ಎಸ್.ಎಸ್.ಮಲ್ಲಿಕಾರ್ಜುನ್, ಕಾಂಗ್ರೆಸ್ ಪಕ್ಷವನ್ನು ಸದಾ ಬೆಂಬಲಿಸುತ್ತಿರುವ ಈ ಭಾಗದವರು ಇಂದು ನನ್ನ ಹೆಸರಿನಲ್ಲಿ ಭವನ ನಿರ್ಮಿಸಿರುವುದನ್ನು ನೋಡಿದರೆ, ಈ ಭಾಗದ ಜನರ ಸಹಕಾರ ಸದಾ ನನ್ನ ಮೇಲೆ ಇರಲಿದೆ ಎಂಬ ಭಾವನೆ ನನಗಿದೆ ಎಂದರು.
ದಕ್ಷಿಣ ವಲಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಪಾಲಿಕೆ ಸದಸ್ಯರುಗಳಾದ ಎ.ಬಿ.ರಹೀಂ, ಮಹಮ್ಮದ್ ಫಾರೂಕ್, ಮಾಜಿ ಸದಸ್ಯ ಅಲ್ಲಾಭಕ್ಷಿ, ಜಿಪಂ ಮಾಜಿ ಸದಸ್ಯ ಬಿ. ಕರಿಬಸಪ್ಪ, ಮಾಗಾನಹಳ್ಳಿ ಪರಶುರಾಮ್, ಎಂ.ಆರ್. ಸಿದ್ದಿಕ್‍ಸಾಬ್, ಸಾಧಿಕ್, ಇಟ್ಟಿಗುಡಿ ಮಂಜುನಾಥ್, ಅಫ್ರೋಜ್ ಮತ್ತಿತರರಿದ್ದರು.