ಚಾಮರಾಜನಗರ: ವಕೀಲರ ಸಂಘದಿಂದ ಶಾಸಕರಿಗೆ ಮನವಿ ಸಲ್ಲಿಕೆ

Update: 2018-02-18 17:45 GMT

ಚಾಮರಾಜನಗರ, ಫೆ.18:  ಚಾಮರಾಜನಗರ ಜಿಲ್ಲಾ ವಕೀಲರ ಸಂಘಕ್ಕೆ ಶಾಸಕರ ಅನುದಾನದಡಿಯಲ್ಲಿ ಪಿಠೋಪಕರಣಗಳನ್ನು ನೀಡಬೇಕು ಎಂದು  ವಕೀಲರ ಸಂಘದಿಂದ ಸ್ಥಳಿಯ ಶಾಸಕ ಸಿ. ಪುಟ್ಟರಂಗಶೆಟ್ಟರಿಗೆ ಮನವಿ ಸಲ್ಲಿಸಿದರು.

ವಕೀಲರ ಸಂಘದ ನೂತನ ಕಟ್ಟಡಕ್ಕೆ ಆಗಮಿಸಿದ್ದ ಅವರನ್ನು ವಕೀಲರ ಸಂಘದ ಅಧ್ಯಕ್ಷ  ಉಮ್ಮತ್ತೂರು ಇಂದುಶೇಖರ್, ಪ್ರಧಾನ ಕಾರ್ಯದರ್ಶಿ ಅರುಣ್‍ಕುಮಾರ್  ಮತ್ತು ಹಿರಿಯ ವಕೀಲರು, ಪದಾಧಿಕಾರಿಗಳು ಮನವಿ ಸಲ್ಲಿಸಿ, ಅನುದಾನ ನೀಡುವಂತೆ ಕೋರಿಕೊಂಡರು. 

ಮನವಿ ಸ್ವೀಕರಿಸಿ ಮಾತನಾಡಿದಶಾಸಕ ಸಿ. ಪುಟ್ಟರಂಗಶೆಟ್ಟಿ, ಸರ್ಕಾರ ಅನುದಾನದಲ್ಲಿ ಸಂಘಕ್ಕೆ ಅಗತ್ಯವಾದ ಪಿಠೋಪಕರಣಗಳನ್ನು ಕೊಡಿಸುವುದು ಕಷ್ಟವೇನೆಲ್ಲ. ಆದರೆ, ಅನುದಾನವನ್ನು ಕಲ್ಪಿಸಿಕೊಡುವ ನಿಧಾನವಾಗಬಹುದು. ಹೀಗಾಗಿ ವೈಯಕ್ತಿಕವಾಗಿ ಸಂಘಕ್ಕೆ ಅಗತ್ಯವಾದ ಪಿಠೋಪಕರಣಗಳನ್ನು ಕಲ್ಪಿಸಿಕೊಡವುದಾಗಿ ಭರವಸೆ ನೀಡಿದರು. 

ವಕೀಲರ ಸಂಘಕ್ಕೆ ಉತ್ತಮವಾದ ಕಟ್ಟಡ, ಗ್ರಂಥಾಲಯ ವ್ಯವಸ್ಥೆ ಇದೆ. ಶುದ್ದ  ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸುವ ಸಂಬಂಧ ನಗರಸಭೆಯಿಂದ ಬೋರ್‍ವೆಲ್ ಕೊರೆಸಿ, ಮೋಟರ್ ಅಳವಡಿಸಿ, ಶುದ್ದ ಕುಡಿಯುವ ನೀರಿ ಘಟಕವನ್ನು ಸ್ಥಾಪನೆ ಮಾಡುವುದಾಗಿ ತಿಳಿಸಿದರು. 

ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಕೆ.ಬಿ. ಶಿವರುದ್ರಪ್ಪ, ಪುಟ್ಟನಂಜಯ್ಯ, ಆರ್. ಚಂದ್ರಶೇಖರ್, ಪದಾಧಿಕಾರಿಗಳಾದ ಗಿರೀಶ್, ಮಹಾಲಿಂಗಸ್ವಾಮಿ,  ಮಹೇಶ್‍ಕುಮಾರ್,  ಶಿವಲಿಂಗೇಗೌಡ, ಪ್ರಸನ್ನಕುಮಾರ್, ಮಂಜುನಾಥಸ್ವಮಿ, ವಾಜಿಂವುಲ್ಲಾ,  ರೂಪಾ, ವಿದ್ಯಾಲತ, ಗಾಯಿತ್ರಿ, ಶ್ವೇತಾ, ಮುತ್ತುರಾಜ್ ಸೇರಿದಂತೆ ಅನೇಕ ವಕೀಲರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News