ಓ ಮೆಣಸೇ..

Update: 2018-02-19 09:00 GMT

ನಮ್ಮದು ಮೌಲ್ಯಾಧಾರಿತ ಆಲೋಚನಾ ಪದ್ಧತಿ - ರಾಮ್ ಮಾಧವ್, ಬಿಜೆಪಿ ರಾಷ್ಟ್ರೀಯ ಪ್ರ. ಕಾರ್ಯದರ್ಶಿ
ಎಷ್ಟು ಕೋಟಿ ರುಪಾಯಿ ಮೌಲ್ಯದ್ದು ಎನ್ನುವುದನ್ನೂ ಹೇಳಿ ಬಿಡಿ.
---------------------

ಗೋವಾ ಸಂಸ್ಕೃತಿ ಹಾಗೂ ಗೋವಾತನವನ್ನು ಗೌರವಿಸದ ಪ್ರವಾಸಿಗರನ್ನು ಇಲ್ಲಿಂದ ಓಡಿಸುತ್ತೇವೆ - ಮನೋಹರ್ ಅಜಗಾಂವಕರ್, ಗೋವಾ ಸಚಿವ
ಅಂದರೆ ಮದ್ಯಪಾನ ಮಾಡದವರೆಲ್ಲ ಗೋವಾ ಬಿಟ್ಟು ಹೋಗಬೇಕೇ?
---------------------

ರಜನಿಕಾಂತ್ ಬಣ್ಣ ಕೇಸರಿಯಾದರೆ ಅವರೊಂದಿಗೆ ರಾಜಕೀಯ ಮೈತ್ರಿ ಸಾಧ್ಯವಿಲ್ಲ - ಕಮಲ್‌ಹಾಸನ್, ನಟ
ಪಕ್ಷವೇ ಕಟ್ಟಿಲ್ಲ, ಮೈತ್ರಿ ಬಗ್ಗೆ ಮಾತನಾಡುತ್ತಿದ್ದೀರಿ.

---------------------

ವಿಕಾಸಕ್ಕೆ ಮೋದಿ, ವಿನಾಶಕ್ಕೆ ರಾಹುಲ್, ಸರ್ವನಾಶಕ್ಕೆ ಸಿದ್ದರಾಮಯ್ಯ ಸಂಕೇತ - ಅನಂತ ಕುಮಾರ್, ಕೇಂದ್ರ ಸಚಿವ
ಈ ದೇಶದ ಪ್ರಧಾನಿ ಸಿದ್ದರಾಮಯ್ಯ ಎಂದು ಯಾರೋ ನಿಮಗೆ ತಪ್ಪು ಮಾಹಿತಿ ನೀಡಿದ್ದಾರೆ.

---------------------
ನಗಲು ಜಿಎಸ್‌ಟಿ ಇಲ್ಲ - ರೇಣುಕಾ ಚೌಧರಿ, ಸಂಸದೆ
ಯಾಕೆ ವಿಧಿಸಬಾರದು? ಎಂದು ಮೋದಿಯವರು ವಿತ್ತ ಸಚಿವರ ಸಲಹೆ ಕೇಳಿದರಂತೆ.

---------------------

ರಾಷ್ಟ್ರೀಯ ಪಕ್ಷಗಳಿಂದ ಜನರು ಬೇಸತ್ತಿದ್ದಾರೆ - ಎಚ್. ವಿಶ್ವನಾಥ್, ಸಂಸದ
ಪ್ರಾದೇಶಿಕ ಪಕ್ಷಗಳಿಗೂ ದೋಚಲು ಸಮಾನಾವಕಾಶ ಸಿಗಬೇಕು ಎಂಬ ಅಭಿಪ್ರಾಯವೇ?

---------------------

ನಾನು ಪ್ರಧಾನ ಮಂತ್ರಿಯಲ್ಲ, ಪ್ರಧಾನ ಸೇವಕ - ನರೇಂದ್ರ ಮೋದಿ, ಪ್ರಧಾನಿ
ಆರೆಸ್ಸೆಸ್‌ನ ಪ್ರಧಾನ ಸೇವಕ ಎಂದಿರಬೇಕು.

---------------------

ದೇಶದಲ್ಲಿ ಹೆಣ್ಣು ಮಕ್ಕಳೂ ಬಿಯರ್ ಕುಡಿಯಲು ಆರಂಭಿಸಿರುವುದು ಆತಂಕಕಾರಿ ಬೆಳವಣಿಗೆ - ಮನೋಹರ್ ಪಾರಿಕ್ಕರ್, ಗೋವಾ ಮುಖ್ಯಮಂತ್ರಿ
ಗೋವಾ ಪ್ರವಾಸೋದ್ಯಮ ಯಶಸ್ವಿಯಾಗುವುದು ಬೇಡವೇ?

---------------------

ಪ್ರೀತಿ ಮಾಡುವುದು ತಪ್ಪಲ್ಲ - ಪ್ರವೀಣ್ ತೊಗಾಡಿಯಾ, ವಿಹಿಂಪ ನಾಯಕ
ಆದರೆ ಈ ವಯಸ್ಸಲ್ಲಿ ನಿಮಗೆ ಪ್ರೀತಿ ಮಾಡಲು ಜೊತೆ ಸಿಗುವುದು ಕಷ್ಟ.

---------------------
     
ಇನ್ನು ಮುಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ - ಉಮಾಭಾರತಿ, ಕೇಂದ್ರ ಸಚಿವೆ
ಫಲಿತಾಂಶ ಮೊದಲೇ ಗೊತ್ತಾಗಿರಬೇಕು.

---------------------

ಪಾಕ್‌ನಲ್ಲಿ ಗಳಿಸುವ ಪ್ರೀತಿಗಿಂತ ಹೆಚ್ಚು ಭಾರತದಲ್ಲಿ ದ್ವೇಷ ಗಳಿಸುತ್ತಿದ್ದೇನೆ - ಮಣಿಶಂಕರ್ ಅಯ್ಯರ್, ಕಾಂಗ್ರೆಸ್ ನಾಯಕ
ಕಾಂಗ್ರೆಸ್ ಪಕ್ಷದಲ್ಲಿ ಗಳಿಸಿದ್ದು ಏನು ಎನ್ನುವುದನ್ನು ಹೇಳಿ.

---------------------

ಭಾರತೀಯ ಸಂಪ್ರದಾಯವನ್ನು ಜರಿಯುವುದೇ ಜಾತ್ಯತೀತತೆ - ಎಸ್.ಎಲ್. ಭೈರಪ್ಪ, ಹಿರಿಯ ಸಾಹಿತಿ
ಮೌಢ್ಯಗಳನ್ನು ಸಂಪ್ರದಾಯವೆಂದು ಕೊರಳಲ್ಲಿ ಸುತ್ತಿಕೊಂಡವರ ಮಾತು.

---------------------

ಅಧಿಕಾರದ ಆಸೆಗಾಗಿ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಟೋಪಿ ಹಾಕಿ ಬಿಜೆಪಿ ಜೊತೆ ಹೋದರೂ ಆಶ್ಚರ್ಯವಿಲ್ಲ - ಕುಮಾರಸ್ವಾಮಿ, ಜೆಡಿಎಸ್ ಅಧ್ಯಕ್ಷ
ನಿಮಗೆ ಟೋಪಿ ಹಾಕಿದ ಝಮೀರ್ ಎಲ್ಲಿದ್ದಾರೆ?

---------------------

ನಾನು ಸ್ಟ್ರಾಂಗ್ ಆಗಿ ರಾಜಕಾರಣ ಮಾಡಿದ್ದರೆ ಸಿಎಂ ಅಭ್ಯರ್ಥಿ ಆಗುತ್ತಿದ್ದೆ - ಅಂಬರೀಷ್, ನಟ
ಸೋಡಾ ಬೆರೆಸದೇ ಕುಡಿಯಬೇಕಿತ್ತು ಅಂತಿದ್ದೀರಾ?
---------------------

ದೇಶದ ಜನರಿಗೆ ಮೋದಿಗಿಂತ ರಾಹುಲ್ ಉತ್ತಮ ನಾಯಕ ಎನ್ನುವುದು ಅರಿವಾಗಿದೆ - ರಾಮಲಿಂಗಾರೆಡ್ಡಿ, ಸಚಿವ
ಕಾಂಗ್ರೆಸಿಗರಿಗೆ ಅದು ಅನ್ನಿಸುವುದು ಯಾವಾಗ?
---------------------

ರಾಹುಲ್ ಗಾಂಧಿ ಪ್ರಚಾರಕ್ಕೆ ಹೋದಲ್ಲೆಲ್ಲಾ ಕಾಂಗ್ರೆಸ್ ನೆಲಕಚ್ಚಿದೆ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಸದ್ಯಕ್ಕೆ ನೀವು ಪ್ರಚಾರಕ್ಕೆ ಹೋದಲ್ಲೆಲ್ಲ ಕಚ್ಚುತ್ತಿರುವ ಈಶ್ವರಪ್ಪರ ಬಗ್ಗೆ ಹೇಳಿ.
---------------------

ನೋಡುವ ಕಣ್ಣು ಹಳದಿಯಾಗಿದ್ದರೆ ಎಲ್ಲವೂ ಹಳದಿಯಾಗಿಯೇ ಕಾಣುತ್ತದೆ - ದೇವೇಗೌಡ, ಮಾಜಿ ಪ್ರಧಾನಿ
ಕಣ್ಣೇ ಇಲ್ಲದ ಪುತ್ರ ವ್ಯಾಮೋಹಿ ಧೃತರಾಷ್ಟ್ರನಿಗೆ ಹಳದಿ ರೋಗದ ಭಯವೇ ಇಲ್ಲ.

---------------------
ರಾಹುಲ್ ಗಾಂಧಿ ಹಾವ-ಭಾವ ನೋಡಿ ಜನರು ಪುಕ್ಕಟೆ ಮನೋರಂಜನೆ ಅನುಭವಿಸುತ್ತಿದ್ದಾರೆ - ಅನಂತಕುಮಾರ್ ಹೆಗಡೆ, ಕೇಂದ್ರ ಸಚಿವ
ನಿಮ್ಮ ಹಾವಭಾವಕ್ಕೆ ಹೆದರಿ ಜನರು ನಾಡು ಬಿಡುವ ಯೋಚನೆಯಲ್ಲಿದ್ದಾರೆ. 

---------------------

ಸಿಎಂ ಸಿದ್ದರಾಮಯ್ಯ ಮುಖ ನೋಡಿದಾಗ ಒರಟಾಗಿ ಕಾಣಿಸಿದರೂ ಅವರ ಮನಸ್ಸು ಮೃದು - ಸಿಎಂ ಇಬ್ರಾಹೀಂ, ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ
ತಮ್ಮ ಕುಟುಂಬಕ್ಕೆ ಎಷ್ಟು ಟಿಕೆಟ್ ಖಚಿತ ಪಡಿಸಿದ್ದೀರಿ, ಹೇಳಿ.

---------------------

ಸಿಎಂ ಸಿದ್ದರಾಮಯ್ಯ ತಮ್ಮ ಹೆಸರನ್ನು ಸಿದ್ ರೆಹಮಾನ್ ಎಂದು ಬದಲಿಸಿಕೊಳ್ಳಲಿ - ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ
ಅವರು ಹೆಸರು ಬದಲಿಸುವುದಕ್ಕೂ ನೀವು ಯಡಿಯೂರಪ್ಪರನ್ನು ನಿಂದಿಸುವುದಕ್ಕೂ ಏನು ಸಂಬಂಧ?

---------------------

ದಲಿತ ಮುಖ್ಯಮಂತ್ರಿ ಆಗಬೇಕೆಂಬ ಕನಸು ನನಗೂ ಇದೆ - ರಮೇಶ ಜಿಗಜಣಗಿ, ಕೇಂದ್ರ ಸಚಿವ

ಬಿಜೆಪಿಯಲ್ಲಿರುವವರೆಗೆ ಅದು ಬರೇ ಹಗಲು ಕನಸು.

---------------------

ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದರೂ ನಾನು ಹೆದರುವುದಿಲ್ಲ - ಡಿ.ಕೆ.ಶಿವಕುಮಾರ್, ಸಚಿವ
ಅಲ್ಲಿ ಈಗಾಗಲೇ ಎಲ್ಲ ವ್ಯವಸ್ಥೆ ಮಾಡಿಟ್ಟಿದ್ದೀರಿ ಎಂದಾಯಿತು.

---------------------

ಕಾಂಗ್ರೆಸ್ ದೊಡ್ಡ ಪಕ್ಷ ಅದಕ್ಕೆ ಹಲವು ಬಾಗಿಲುಗಳಿವೆ. ಯಾರು, ಯಾವಾಗ, ಯಾವ ಬಾಗಿಲಿನಿಂದ ಬೇಕಾದರೂ ಬರಬಹುದು - ಸಂತೋಷ್ ಲಾಡ್, ಸಚಿವ
ಸದ್ಯಕ್ಕೆ ಅದನ್ನು ಹೊರ ಹೋಗುವುದಕ್ಕೆ ಹೆಚ್ಚು ಬಳಸುತ್ತಿರುವಂತಿದೆ.

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...