ದಾವಣಗೆರೆ: ಉಚಿತ ಬೃಹತ್ ಆರೋಗ್ಯ ಮತ್ತು ದಂತ ತಪಾಸಣಾ ಶಿಬಿರ

Update: 2018-02-19 17:28 GMT

ದಾವಣಗೆರೆ,ಫೆ.19: ಹಿರಿಯ ನಾಗರಿಕರು, ನಿವೃತ್ತ ಮತ್ತು ಹಾಲಿ ಯೋಧರಿಗೆ ಬಾಪೂಜಿ ಆಸ್ಪತ್ರೆಯಲ್ಲಿ ಶೇ. 50ರಷ್ಟು ಉಚಿತವಾಗಿ ಚಿಕಿತ್ಸೆ ನೀಡಲು ಆದೇಶಿಸಲಾಗಿದೆ ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಕರೆ ನೀಡಿದರು.

ಬಾಪೂಜಿ ವಿದ್ಯಾಸಂಸ್ಥೆಯ ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಬಾಪೂಜಿ ದಂತ ವೈದ್ಯಕೀಯ ಮಹಾವಿದ್ಯಾಲಯ ಇವರ ಸಹಯೋಗದೊಂದಿಗೆ ಮಹಾನಗರ ಪಾಲಿಕೆ ವ್ಯಾಪ್ತಿಯ 15 ಮತ್ತು 16ನೇ ವಾರ್ಡ್ ವ್ಯಾಪ್ತಿಯ ನಾಗರೀಕರಿಗೆ ವಾಟರ್ ಟ್ಯಾಂಕ್ ಪಕ್ಕದ ಉರ್ದು ಸ್ಕೂಲ್‍ನಲ್ಲಿ ಹಮ್ಮಿಕೊಂಡಿದ್ದ ಉಚಿತ ಬೃಹತ್ ಆರೋಗ್ಯ ಮತ್ತು ದಂತ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ವಯಸ್ಸಾದ ಮೇಲೆ ರೋಗಗಳು ಹೆಚ್ಚು ಬರಲಿವೆ. ಅಂತಹ ರೋಗಗಳಿಗೆ ನಮ್ಮ ಬಾಪೂಜಿ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುವುದು. ಹಿರಿಯ ನಾಗರೀಕರು, ನಿವೃತ್ತ ಮತ್ತು ಹಾಲಿ ಯೋಧರು ಈ ಯೋಜನೆಯ ಲಾಭ ಪಡೆಯಬೇಕೆಂದು ಎಂದು ಅವರು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಶಿಸ್ತು ಬದ್ಧ ಜೀವನ ನಡೆಸಿದರೆ ಮಾತ್ರ ಆರೋಗ್ಯದಿಂದಿರಲು ಸಾಧ್ಯ ಎಂದರು.

16ನೇ ವಾರ್ಡ್ ಮಹಾನಗರ ಪಾಲಿಕೆ ಸದಸ್ಯರಾದ ಮಂಜಮ್ಮ ಹನುಮಂತಪ್ಪ, ಡಿ.ಹೆಚ್.ಓ. ಡಾ. ತ್ರಿಪುಲಾಂಬಿಕಾ, ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ನಿರ್ದೇಶಕ ಡಾ. ಧನಂಜಯ ಮಾತನಾಡಿದರು.

ಉಪಮಹಾಪೌರರಾದ ನಾಗರತ್ನಮ್ಮ, 15ನೇ ವಾರ್ಡ್ ಮಹಾನಗರ ಪಾಲಿಕೆ ಸದಸ್ಯ ರೇಣುಕಾಬಾಯಿ ವೆಂಕಟೇಶ್ ನಾಯ್ಕ, ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಎಸ್.ಬಿ. ಮುರುಗೇಶ್, ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಹಿರಿಯ ನಿರ್ದೇಶಕ ಡಾ.ಹೆಚ್.ಗುರುಪಾದಪ್ಪ, ಶಂಕರ್, 16ನೇ ವಾರ್ಡ್ ಅಧ್ಯಕ್ಷ ಧರ್ಮಣ್ಣ, ಅನ್ನಪೂರ್ಣಮ್ಮ, ರಘು, ಬೆಂಡಿಗೇರಿ ರಾಜಶೇಖರ್, ವಿರೇಶ್, ಮುನಿಸ್ವಾಮಿ, ಶಿವಕುಮಾರ್, ವೀರಭದ್ರಪ್ಪ, ಮುದೇಗೌಡ್ರು, ದಾದಾಪೀರ್, ಮಹಬೂಬ್ ಸಾಬ್, ಶ್ರೀನಿವಾಸ್, ನಿಂಗರಾಜ್, ರಾಮಣ್ಣ, ಮುಸ್ತಾಫ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News