ಮೊಬೈಲ್ ಬಳಕೆದಾರರಿಗೆ ಶಾಕಿಂಗ್ ಸುದ್ದಿ: ಇನ್ನು ಮುಂದೆ 10 ಡಿಜಿಟ್ ನಂಬರ್ ನಡೆಯೊಲ್ಲ!

Update: 2018-02-21 09:11 GMT

ಹೊಸದಿಲ್ಲಿ, ಫೆ.21:  ಮೊಬೈಲ್  ಸಿಮ್ ನಂಬ್ರಗಳು ಇನ್ನು  ನಾಲ್ಕು ತಿಂಗಳಲ್ಲಿ 13 ಡಿಜಿಟ್ ಗೆ ಬದಲಾಗಲಿದೆ. ಈಗಿರುವ 10 ಡಿಜಿಟ್ ಬದಲಾಗಿ  ಜುಲೈ 1ರಿಂದ 13 ಡಿಜಿಟ್ ನಂಬರ್ ಚಲಾವಣೆಗೆ ಬರಲಿದೆ.

ಜುಲೈ 1ರಿಂದ 13 ಡಿಜಿಟ್ ಮೊಬೈಲ್ ನಂಬರ್ ನೀಡುವಂತೆ ಎಲ್ಲ ಟೆಲಿಕಾಂ ಸಂಸ್ಥೆಗಳಿಗೆ ಟೆಲಿಕಾಂ ಇಲಾಖೆ ಆದೇಶ ನೀಡಿದೆ. ಇದರಿಂದಾಗಿ ಇದೀಗ  10 ಡಿಜಿಟ್ ಮೊಬೈಲ್  ನಂಬರ್  ಹೊಂದಿರುವ ಗ್ರಾಹಕರು ತಮ್ಮ ಮೊಬೈಲ್ ನಂಬರ್ ಅನ್ನು 13 ಡಿಜಿಟ್ ಗೆ ಬದಲಾಯಿಸಬೇಕಾಗಿದೆ.

2018ರ ಡಿಸೆಂಬರ್ 31ರವರೆಗೆ ಮಾತ್ರ 10 ಡಿಜಿಟ್ ನಂಬರ್ ಚಲಾವಣೆಯಲ್ಲಿರುತ್ತದೆ.  ಅಷ್ಟರ ವೇಳೆಗೆ  ಗ್ರಾಹಕರು ತಮ್ಮ ಸಿಮ್ ನಂಬರ್ 13 ಡಿಜಿಟ್ ಗೆ ಬದಲಾಯಿಸಿಕೊಳ್ಳಬೇಕಾಗಿರುವುದು ಅನಿವಾರ್ಯ  ಎಂದು ಅಧಿಕೃತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News