×
Ad

ಮೈಸೂರು: ಮೂಲಭೂತ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಏಕಾಂಗಿ ಧರಣಿ

Update: 2018-02-21 20:04 IST

ಮೈಸೂರು,ಫೆ.21: ರಮಬಾಯಿನಗರ (ಶ್ರೀನಗರ) ಇಲ್ಲಿನ ಇಡಬ್ಲ್ಯೂಎಸ್ ಮನೆಗಳಲ್ಲಿ ವಾಸಮಾಡುತ್ತಿರುವ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಒತ್ತಾಯಿಸಿ ಬುಧವಾರ ನಗರಪಾಲಿಕೆ ಕಚೇರಿ ಎದುರು ಎಲೆಕ್ಟ್ರಿಕಲ್ ನಾಗರಾಜು ಎಂಬುವವರು ಏಕಾಂಗಿ ಪ್ರತಿಭಟನೆ ನಡೆಸಿದರು.

2002-03ರಲ್ಲಿ ರಾಜೀವ್ ಗಾಂಧಿ ರೋಜ್ ಗಾರ್ ಯೋಜನೆಯಡಿ ರಮಬಾಯಿನಗರ (ಶ್ರೀನಗರ) ಇಲ್ಲಿ ಇಡಬ್ಲ್ಯೂಎಸ್ ಮನೆಗಳನ್ನು ಕಟ್ಟಿ ನೂರಾರು ಬಡಜನರಿಗೆ ಹಂಚಿದ್ದರು. ಆದರೆ ಸದರಿ ಮನೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದಿದ್ದರೂ ಕೆಲ ಕುಟುಂಬದವರು ಇಲ್ಲೇ ವಾಸಿಸುತ್ತಿದ್ದಾರೆ. ಮುಂಬರುವ ಚುನಾವಣೆಯ ದೃಷ್ಟಿಯಿಂದಾದರೂ ರಮಬಾಯಿನಗರದ 4ನೇ ಬ್ಲಾಕ್ ಮನೆಗಳಿಗೆ ಮೂಲಭೂತ ಸೌಕರ್ಯಗಳಾದ ಯುಜಿಡಿ, ನೀರಿನ ಸಂಪರ್ಕ, ವಿದ್ಯುತ್ ಸಂಪರ್ಕ, ರಸ್ತೆ ಮಾಡಿಸಿ ಕೊಡಬೇಕೆಂದು ಒತ್ತಾಯಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News