ಹನೂರು: ಜೂಜು ಅಡ್ಡೆಯ ಮೇಲೆ ದಾಳಿ; ಐವರ ಬಂಧನ, ಬಿಡುಗಡೆ
Update: 2018-02-21 20:13 IST
ಹನೂರು,ಫೆ.21: ಇಸ್ಪೀಟ್ ಅಡ್ಡೆಯ ಮೇಲೆ ದಾಳಿ ನಡೆಸಿದ ಹನೂರು ಪೊಲೀಸರು ಐವರನ್ನು ಬಂಧಿಸಿ ನಗದು ವಶಪಡಿಸಿಕೊಂಡಿರುವ ಘಟನೆ ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಲೊಕ್ಕನಹಳ್ಳಿ ಬಳಿ ನಡೆದಿದ್ದು, ನಂತರ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಮಂಗಳವಾರ ಮಧ್ಯಾಹ್ನ ಲೊಕ್ಕನಹಳ್ಳಿ ಉಪ ಠಾಣೆಯ ಮುಖ್ಯಪೇದೆ ಮಲ್ಲಿಕಾರ್ಜುನ್ ಗೆ ದೊರೆತ ಖಚಿತ ಮಾಹಿತಿ ಮೇರೆಗೆ, ಹನೂರು ಠಾಣೆಯ ಮುಖ್ಯಪೇದೆ ಹೂವಯ್ಯ, ಪೇದೆ ರಾಮಶೆಟ್ಟಿ ದಾಳಿ ನಡೆಸಿ, ಬಿ.ಜಿ ದೊಡ್ಡಿ ಗ್ರಾಮದ ಇಬ್ಬರು, ವಿ.ಎಸ್.ದೊಡ್ಡಿಯ ಓರ್ವ, ಮತ್ತು ಹುತ್ತೂರು ಗ್ರಾಮದ ಇಬ್ಬರನ್ನು ಬಂಧಿಸಿ, ಪಣಕ್ಕಿಟ್ಟಿದ್ದ 5260 ರೂಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.