ಶಿವಮೊಗ್ಗ: ಅಕ್ರಮ ಮದ್ಯ ಮಾರಾಟ ಅಡ್ಡೆಗೆ ದಾಳಿ; ಐವರ ಬಂಧನ
ಶಿವಮೊಗ್ಗ, ಫೆ. 21: ಪ್ರತ್ಯೇಕ ಘಟನೆಗಳಲ್ಲಿ ಭದ್ರಾವತಿ ತಾಲೂಕಿನ ನಾಲ್ಕು ಹಾಗೂ ಶಿವಮೊಗ್ಗದ ಒಂದು ಕಡೆ ಡಿಸಿಬಿ ಪೊಲೀಸ್ ತಂಡ ದಾಳಿ ನಡೆಸಿ, ಕಾನೂನು ಬಾಹಿರವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಐವರನ್ನು ಬಂಧಿಸಿ ಪ್ರಕರಣ ದಾಖಲಿಸಿದೆ.
ಭದ್ರಾವತಿ: ತಾಲೂಕಿನ ಬೊಮ್ಮನಕಟ್ಟೆಯ ಮನೆಯ ಮುಂಭಾಗದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಕುಮಾರ್ ಎಂಬಾತನನ್ನು ಬಂಧಿಸಿ 570 ರೂ. ಮೌಲ್ಯದ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದೇ ಗ್ರಾಮದ ಭವಾನಿ ಮಿಲ್ಟ್ರಿ ಹೋಟೆಲ್‍ನಲ್ಲಿ 510 ರೂ. ಮೌಲ್ಯದ ಮದ್ಯ ವಶಕ್ಕೆ ಪಡೆದು, ಆರೋಪಿ ಶ್ರೀನಿವಾಸ್ ಎಂಬಾತನನ್ನು ಬಂಧಿಸಲಾಗಿದೆ.
ಹಿರಿಯೂರು ಗ್ರಾಮದ ಮನೆಯ ಮುಂಭಾಗ ಮದ್ಯ ಮಾರಾಟ ಮಾಡುತ್ತಿದ್ದ ಶ್ರೀನಿವಾಸ್ ಹಾಗೂ ಉಜ್ಜನಿಪುರದ ಮಿಲ್ಟ್ರಿ ಹೋಟೆಲ್‍ವೊಂದರಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಬಾಬು ಎಂಬ ಆಪಾದಿತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಎರಡು ಪ್ರಕರಣಗಳಲ್ಲಿ ಒಟ್ಟಾರೆ 1230 ರೂ. ಮೌಲ್ಯದ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.
ಶಿವಮೊಗ್ಗ: ತಾಲೂಕಿನ ಗೋಂಧಿಚಟ್ನಳ್ಳಿ ಗ್ರಾಮದ ಮೀನುಗಾರರ ಬೀದಿಯ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ವಿಜಯ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಈತನಿಂದ 600 ರೂ. ಮೌಲ್ಯದ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.