×
Ad

ಮೈಸೂರು; ಅನಾರೋಗ್ಯದಿಂದ ಬೇಸತ್ತು ಮಹಿಳೆ ಆತ್ಮಹತ್ಯೆ

Update: 2018-02-21 22:10 IST

ಮೈಸೂರು,ಫೆ.21: ಅನಾರೋಗ್ಯದ ಕಾರಣದಿಂದ ಮನನೊಂದ ಮಹಿಳೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಗಣೇಶನಗರದ ನಿವಾಸಿ ಶಿವಣ್ಣ ಎಂಬವರ ಪತ್ನಿ ಶೋಭಾ(35)ಎಂದು ಗುರುತಿಸಲಾಗಿದೆ.

ಇವರು ಲೋ ಬಿಪಿಯಿಂದ ಬಳಲುತ್ತಿದ್ದು, ಪದೇ ಪದೇ ಅನಾರೋಗ್ಯಕ್ಕೀಡಾಗುತ್ತಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನಿನ್ನೆ ಮಹಡಿಯ ಮೇಲಿನ ರೂಮಿಗೆ ತೆರಳಿದವರು ಎಷ್ಟು ಹೊತ್ತಾದರೂ ಮರಳಿ ಬಾರದಿರುವ ಕಾರಣ ಹೋಗಿ ನೋಡಿದ್ದು, ಈ ವೇಳೆ ನೇಣಿಗೆ ಶರಣಾಗಿರುವುದು ಕಂಡು ಬಂದಿದೆ. ಕೂಡಲೇ ಉದಯಗಿರಿ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News