ಹೊನ್ನಾವರ: ಬಸ್ -ಟೆಂಪೂ ಮುಖಾಮುಖಿ ಢಿಕ್ಕಿ; 15 ಮಂದಿಗೆ ಗಾಯ
Update: 2018-02-21 22:20 IST
ಹೊನ್ನಾವರ,ಫೆ.21: ಬಸ್ ಮತ್ತು ಖಾಸಗಿ ಟೆಂಪೂ ಮುಖಾಮುಖಿ ಢಿಕ್ಕಿಯಾಗಿ ಟೆಂಪೋ ಪಲ್ಟಿಯಾದ ಪರಿಣಾಮ 15 ಜನರು ಗಾಯಗೊಂಡ ಘಟನೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ರಾಮತೀರ್ಥ ತಿರುವಿನ ಸಮೀಪ ಬುಧವಾರ ಸಂಭವಿಸಿದೆ.
ಹೊನ್ನಾವರದಿಂದ ತೊಳಸಾಣಿಗೆ ಹೊರಟಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸು ಮತ್ತು ಕುಮಟಾ ಕಡೆಯಿಂದ ಬರುತ್ತಿದ್ದ ಖಾಸಗಿ ಟೆಂಪೊ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಟೆಂಪೋ ಚಾಲಕ ಜೊಯಲ್ ನಿಗೆ ತಲೆಗೆ ಹಾಗೂ ಕೈ, ಕಾಲಿಗೆ ಗಂಭೀರ ಗಾಯವಾಗಿದೆ. ಟೆಂಪೋ ಮುಂಭಾಗ ಸಂಪೂರ್ಣ ಜಖಂ ಆಗಿದೆ.
ಗಾಯಗೊಂಡ 15 ಜನರಲ್ಲಿ 10 ಕಾಲೇಜು ವಿದ್ಯಾರ್ಥಿಗಳಿದ್ದಾರೆ. ಗಾಯಾಳುವನ್ನು ತಾಲೂಕ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.