×
Ad

ಎಸ್ಸಿ, ಎಸ್ಟಿ ಫಲಾನುಭವಿಗಳಿಗೆ ಸಾಲ ನಿರಾಕರಿಸಿದರೆ ಕ್ರಿಮಿನಲ್ ಮೊಕದ್ದಮೆ: ಬಿ.ಸುರೇಶಗೌಡ

Update: 2018-02-21 23:09 IST

ತುಮಕೂರು.ಫೆ.21: ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನರಿಗೆ ಬ್ಯಾಂಕ್ ಮೂಲಕ ವಿವಿಧ ನಿಗಮ ಮಂಡಳಿಗಳು ನೀಡುವ ಸಾಲ ಸೌಲಭ್ಯವನ್ನು ನೀಡಲು ಬ್ಯಾಂಕುಗಳ ನಿರಾಕರಿಸಿದರೆ ಅಂತಹ ಬ್ಯಾಂಕುಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಎಚ್ಚರಿಸಿದ್ದಾರೆ.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕೈದಾಳ ಗ್ರಾಮದಲ್ಲಿ ವಾಲ್ಮೀಕಿ ಅಭಿವೃದ್ದಿ ನಿಗಮ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ ಆಯೋಜಿಸಿದ್ದ ಸಾಲ ಸೌಲಭ್ಯ ವಿತರಣಾ ಕಾರ್ಯಕ್ರಮದಲ್ಲಿ ಫಲಾನುಭವಿ ಗಳಿಗೆ ಮಂಜೂರಾತಿ ಪತ್ರ ವಿತರಿಸಿ ಮಾತನಾಡುತಿದ್ದ ಅವರು, ಪರಿಶಿಷ್ಟ ಜಾತಿ ಮತ್ತು ವರ್ಗಗಳ ಫಲಾನುಭವಿಗಳು ಬ್ಯಾಂಕಿಗೆ ಬಂದ ಸಂದರ್ಭದಲ್ಲಿ ಸಿಬ್ಬಂದಿ ತುಚ್ಚವಾಗಿ ಕಾಣದೆ, ತುರ್ತಾಗಿ ಸಾಲ ವಿತರಣೆಗೆ ಕ್ರಮ ಕೈಗೊಳ್ಳಬೇಕು. ವಿನಾಕಾರಣ ಅಲೆದಾಡಿಸಿದರೆ ಅಂತಹ ಬ್ಯಾಂಕ್ ಮ್ಯಾನೇಜರ್ ವಿರುದ್ದ ಆರ್.ಬಿ.ಐ ನಿಯಮಗಳ ಅನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ ವಿಧಿಯಿಲ್ಲ ಎಂದರು.

ತುಮಕೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕನಾಗಿ ಕಳೆದ 10 ವರ್ಷಗಳಿಂದ ವಾಲ್ಮೀಕಿ ನಿಗಮ ಮತ್ತು ಅಂಬೇಡ್ಕರ್ ನಿಗಮ ಮತ್ತು ದೇವರಾಜು ಅರಸು ನಿಗಮದಿಂದ ವಾರ್ಷಿಕ 100 ಕೊಳವೆ ಬಾವಿಗಳಂತೆ ಸುಮಾರು 1 ಸಾವಿರ ಜನರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಿಕೊಡಲಾಗಿದೆ. ಎಲ್ಲ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕಪಂಪು ಮೋಟಾರು ಕೇಬಲ್ ಸ್ಟಾಟರ್ ಕೊಡಿಸಲಾಗಿದೆ, ದಲಿತರು ಸಮಾಜದ ಮುಖ್ಯ ವಾಹಿನಿಗೆ ಬರಬೇಕಾದ ಅವಶ್ಯಕತೆ ಇದೆ ಈ ನಿಟ್ಟಿನಲ್ಲಿ ದಲಿತರಿಗೆ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವಂತ ಕಾರ್ಯ ಅತ್ಯಂತ ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದು ಶಾಸಕ ಬಿ.ಸುರೇಶಗೌಡ ತಿಳಿಸಿದರು.

ಸರ್ಕಾರದ ಅನೇಕ ಜನಪರ ಯೋಜನೆಗಳ ವೈಫಲ್ಯಕ್ಕೆ ಕಾರಣವೇ ಈ ಬ್ಯಾಂಕುಗಳು ಎಂದ ಶಾಸಕರು, ಗ್ರ್ರಾಮಾಂತರ ಕ್ಷೇತ್ರದಲ್ಲಿ ಸೌಲಭ್ಯ ಕೇಳಿ ಅರ್ಜಿ ಸಲ್ಲಿಸಿರುವ ಎಲ್ಲ ಫಲಾನುಭವಿಗಳಿಗೂ ಕೂಡಾ ಸೌಲಭ್ಯ ನೀಡುವುದಾಗಿ ಇದೇ ಸಂದರ್ಭದಲ್ಲಿ ಶಾಸಕ ಬಿ.ಸುರೇಶಗೌಡ ತಿಳಿಸಿದರು.

ನಂತರ ಹೈನುಗಾರಿಕೆಯ ಹಸು, ಸಾಕಾಣಿಕೆ ಕುರಿ ಮೇಕೆ ಸಾಕಾಣಿಕೆ ಚರ್ಮ ಕುಟೀರಕ್ಕೆ ನೇರ ಸಾಲ ಯೋಜನೆಯಡಿ ಫಲಾನುಭವಿಗಳಿಗೆ ಸಾಲ ಮತ್ತು ಸಹಾಯಧನವನ್ನು ಒಟ್ಟು 638 ಜನ ಫಲಾನುಭವಿಗಳಿಗೆ ವಿತರಿಸಲಾಯಿತು.

ಈ ವೇಳೆ ತಾಲೂಕು ಪಂಚಾಯತ್ ಅಧ್ಯಕ್ಷ ಗಂಗಾಂಜನೇಯ, ಜಿ.ಪಂ.ಸದಸ್ಯ ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News