ಹನೂರು : ಮನೆಯಲ್ಲಿ ಗಾಂಜಾ ಸಂಗ್ರಹಿಸಿಟ್ಟಿದ್ದ ಆರೋಪಿಯ ಬಂಧನ
Update: 2018-02-22 18:01 IST
ಹನೂರು,ಫೆ.22 : ಸಮೀಪದ ಪುದುರಾಮಾಪುರ ಗ್ರಾಮದ ಮನೆಯಲ್ಲಿ ಗಾಂಜಾ ಸಂಗ್ರಹಿಸಿಟ್ಟಿದ್ದ ಆರೋಪಿಯನ್ನು ರಾಮಾಪುರ ಪೋಲಿಸರು ಬಂಧಿಸಿದ್ದಾರೆ.
ತಾಲೂಕಿನ ಪುದುರಾಮಾಪುರ ಗ್ರಾಮದ ನಿವಾಸಿ ಸುಬ್ರಮಣಿ (62) ಎಂಬಾತನೇ ಬಂಧಿತ ಆರೋಪಿ. ಈತ ತನ್ನ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾವನ್ನು ಬೆಳೆದು ಅದನ್ನು ಹದ ಮಾಡಿ ಮಾರಾಟ ಮಾಡುವ ಉದ್ಧೇಶದಿಂದ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದನು.
ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ರಾಮಾಪುರ ಪೋಲಿಸರು ಮನೆಯ ಮೇಲೆ ದಾಳಿ ನಡೆಸಿ ಸುಬ್ರಮಣಿಯನ್ನು ವಿಚಾರಣೆಗೊಳಪಡಿಸಿದಾಗ ಗಾಂಜಾ ಸಂಗ್ರಹಿಟ್ಟಿದ್ದು ಧೃಡಪಟ್ಟಿದೆ. 1350 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡ ಪೋಲಿಸರು ಆರೋಪಿಯನ್ನು ಬಂಧಿಸಿ ನ್ಯಾಯಾಯಲಕ್ಕೆ ಹಾಜರುಪಡಿಸಿದ್ದಾರೆ.
ದಾಳಿಯಲ್ಲಿ ಇನ್ಸ್‍ಪೆಕ್ಟರ್ ಶಿವಸ್ವಾಮಿ, ಎಎಸೈ ರಾಘವೇಂದ್ರರಾವ್, ಸಿಬ್ಬಂದಿಗಳಾದ ಮಾದೇಶ್, ನಾಗೇಂದ್ರ, ಸೈಯದ್, ಶಂಕರ್, ರಮೇಶ್, ರಘು, ಕಿರಣ್‍ಕುಮಾರ್ ಭಾಗವಹಿಸಿದ್ದರು.