ಕಾಂಗ್ರೆಸ್ ಸಂಪಾಜೆ ಹೋಬಳಿ ಅಧ್ಯಕ್ಷರಾಗಿ ಪಿ.ಎಲ್.ಸುರೇಶ್ ಆಯ್ಕೆ

Update: 2018-02-22 12:48 GMT

ಮಡಿಕೇರಿ,ಫೆ.22 : ಕಾಂಗ್ರೆಸ್ ಪಕ್ಷದ ಸಂಪಾಜೆ ಹೋಬಳಿ ಅಧ್ಯಕ್ಷರಾಗಿ ಪಿ.ಎಲ್.ಸುರೇಶ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಜಾಹೀರ್ ಆಯ್ಕೆಯಾಗಿದ್ದಾರೆ.

ನಗರದ ಹೊಟೇಲ್ ಹಿಲ್‍ಟಾಪ್ ಸಭಾಂಗಣದಲ್ಲಿ ಸಂಪಾಜೆ ಹೋಬಳಿ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾದ ಸದಾನಂದ ಬಂಗೇರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಕಾರ್ಯಾಧ್ಯಕ್ಷರಾಗಿ ಕೆ.ಸದಾನಂದ ಬಂಗೇರ, ಬಂಗಾರಕೊಡಿ ಪುರುಷೋತ್ತಮ ಗೌಡ, ಉಪಾಧ್ಯಕ್ಷರಾಗಿ ಪಿ.ಬಿ.ಮುಹಮ್ಮದ್, ಕೊಂಪುಳಿ ಮೋಹನಗೌಡ, ವೇದಾವತಿ ದೇವಾಯಿರ, ಕುಂಬಳಚೇರಿ ಜಗದೀಶ ಗೌಡ, ಕಾರ್ಯದರ್ಶಿಯಾಗಿ ಹೆಚ್.ಬಿ.ಶಶಿಕುಮಾರ್, ಮೋಹನ್‍ದಾಸ್ ಮುಕ್ಕಾಟಿ, ಮೊರೀಸ್ ನರೋನಾ, ಲೀಲಾವತಿ ನಿಡ್ಯಮಲೆ, ಖಜಾಂಚಿಯಾಗಿ ಅರೆಯಡ ರಮೇಶ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೈದಲಭಿ, ಎಂ.ಕೆ.ಶಿವಪ್ಪ, ಎಂ. ವಿ.ಗಂಗಾಧರ, ವೇದಾವತಿ, ಮಾಧವ, ದೀಪಕ್, ಗೋಪಾಲ ಕೊಳಂಗಾಯ, ಪೊಡಿಯ, ಚಿಣ್ಣಪ್ಪ ಮುಂತಾದವರನ್ನು ಆಯ್ಕೆ ಮಾಡಲಾಯಿತು.

ಸಂಪಾಜೆ, ಮದೆ, ಚೆಂಬು ಮತ್ತು ಪೆರಾಜೆ ವಲಯಗಳ ಕಾಂಗ್ರೆಸ್ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದು, ಹೋಬಳಿ ಮಟ್ಟದಲ್ಲಿ ಪಕ್ಷವನ್ನು ಸದೃಢಗೊಳಿಸಲು ನಿರ್ಧಾರ ಕೈಗೊಂಡರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಂಪಾಜೆ ಹೋಬಳಿಯಿಂದ ಕಾಂಗ್ರೆಸ್ ಅಭ್ಯರ್ಥಿಗೆ ಅತ್ಯಧಿಕ ಮತಗಳನ್ನು ಗಳಿಸಿಕೊಡುವ ವಿಶ್ವಾಸವನ್ನು ಪದಾಧಿಕಾರಿಗಳು ವ್ಯಕ್ತಪಡಿಸಿದರು.   
ಬಂಗಾರಕೊಡಿ ಪುರುಷೋತ್ತಮ ಗೌಡ ಸ್ವಾಗತಿಸಿ, ಮಹಮ್ಮದ್ ಜಾಹೀರ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News