ರೈತ ನಾಯಕ ಮರಳಿ ಮಣ್ಣಿಗೆ...
Update: 2018-02-22 23:53 IST
ಕಳೆದ ರವಿವಾರ ಹೃದಯಾಘಾತದಿಂದ ನಿಧನರಾದ ಮೇಲುಕೋಟೆ ಶಾಸಕ, ರೈತನಾಯಕ, ಮಣ್ಣಿನ ಮಗ ಕೆ.ಎಸ್.ಪುಟ್ಟಣ್ಣಯ್ಯ ಅವರ ಪಾರ್ಥಿವ ಶರೀರ ಗುರುವಾರ ಮಣ್ಣಿನಲ್ಲಿ ಲೀನವಾಯಿತು. ಸಚಿವಾದಿ ಗಣ್ಯರು, ಸಹಸ್ರಾರು ರೈತಸಂಘದ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಶೋಕ ಸಾಗರದ ನಡುವೆ ಪಾಂಡವಪುರ ತಾಲೂಕು ಕ್ಯಾತನಹಳ್ಳಿಯ ಅವರ ತೋಟದಲ್ಲಿ ಸಕಲ ಸರಕಾರಿ ಗೌರವದೊಂದಿಗೆ ಮೃತರ ಅಂತ್ಯಕ್ರಿಯೆ ನೆರವೇರಿತು.