ಟ್ವಿಟ್ಟರ್‌ನಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರನ್ನು ಅನುಸರಿಸಿದ ಬಿಗ್ ಬಿ

Update: 2018-02-23 04:19 GMT

ಹೊಸದಿಲ್ಲಿ, ಫೆ. 23: ಬಾಲಿವುಡ್ ದಂತಕಥೆ ಮತ್ತು ಟ್ವಿಟ್ಟರ್‌ನಲ್ಲಿ ಸದಾ ಸಕ್ರಿಯರಾಗಿರುವ ಅಮಿತಾಬ್ ಬಚ್ಚನ್, ಮೈಕ್ರೊ ಬ್ಲಾಗಿಂಗ್ ನೆಟ್‌ವರ್ಕ್‌ನಲ್ಲಿ ದೊಡ್ಡ ಸಂಖ್ಯೆಯ ಹಿರಿಯ ಕಾಂಗ್ರೆಸ್ ಮುಖಂಡರನ್ನು ಫಾಲೊ ಮಾಡಲಾರಂಭಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಬಿಜೆಪಿಯಿಂದ ಹಿಡಿದು ತೆಲುಗುದೇಶಂ ಪಾರ್ಟಿವರೆಗೆ ಹಲವು ರಾಜಕೀಯ ಪಕ್ಷಗಳ ಮುಖಂಡರನ್ನು ಬಿಗ್ ಬಿ ಫಾಲೊ ಮಾಡುತ್ತಿದ್ದರೂ, ಇತ್ತೀಚಿನ ಹೊಸ ಸೇರ್ಪಡೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ಮನೀಶ್ ತಿವಾರಿ, ಸಂಜಯ್ ಝಾ, ಕಪಿಲ್ ಸಿಬಾಲ್, ಪ್ರಿಯಾಂಕಾ ಚತುರ್ವೇದಿ, ಅಜಯ್ ಮಾಕೆನ್ ಮತ್ತು ಪಿ.ಚಿದಂಬರಂ ಸೇರಿದ್ದಾರೆ.

ಟ್ವಿಟ್ಟರ್‌ನಲ್ಲಿ 3.31 ಕೋಟಿ ಅಭಿಮಾನಿಗಳನ್ನು ಹೊಂದಿರುವ ಈ ಮೇರುನಟನಿಗೆ ಮಂಗಳವಾರ ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ತಮ್ಮನ್ನು ಫಾಲೊ ಮಾಡುತ್ತಿರುವುದಕ್ಕೆ ಕೃತಜ್ಞತೆ ಹೇಳಿದ್ದಾರೆ. ಬಿಗ್ ಬಿ ಚಿತ್ರಗಳನ್ನೇ ನೋಡುತ್ತಾ ಬೆಳೆದ, ಹೊಸ ಚಿತ್ರ ಬಿಡುಗಡೆಯಾದಾಗಲೆಲ್ಲ ಮೊದಲ ಪ್ರದರ್ಶನವನ್ನು ನೋಡುತ್ತಾ ಬೆಳೆದ ನನಗೆ ಇದು ಅತೀವ ಸಂತಸ ತಂದಿದೆ ಎಂದು ಹೇಳಿಕೊಂಡಿದ್ದಾರೆ.

ಮಾಜಿ ಪ್ರಧಾನಿ ರಾಜೀವ್‌ಗಾಂಧಿಯವರಿಗೆ ಆಪ್ತರಾಗಿದ್ದ ಬಿಗ್ ಬಿ ಅಲಹಾಬಾದ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ 1984ರಲ್ಲಿ ಗೆಲುವು ಸಾಧಿಸಿದ್ದರು. ಬೋಫೋರ್ಸ್ ಹಗರಣದ ಬಳಿಕ ಅವರು ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿದ್ದರು. ಇದೀಗ ಅಮಿತಾಬ್ ಬಚ್ಚನ್ ಎನ್‌ಡಿಎ ಸರ್ಕಾರದ ಸ್ವಚ್ಛಭಾರತ ಅಭಿಯಾನ ಮತ್ತು ಗುಜರಾತ್ ಬಿಜೆಪಿ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಪ್ರಚಾರ ರಾಯಭಾರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News