ಶ್ರವಣಬೆಳಗೊಳ: ಕಾಲ್ನಡಿಗೆಯಲ್ಲೇ ವಿಂಧ್ಯಗಿರಿ ಹತ್ತಿದ ಹೆಚ್.ಡಿ. ದೇವೇಗೌಡ

Update: 2018-02-24 14:20 GMT

ಶ್ರವಣಬೆಳಗೊಳ,ಫೆ.24: ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕ ಮಹೋತ್ಸವ ಬಹಳ ವಿಜೃಂಭಣೆಯಿಂದ ನಡೆಯುತ್ತಿದ್ದು, ಗಣ್ಯಾತಿಗಣ್ಯರು ಆಗಮಿಸುತ್ತಿದ್ದಾರೆ. ರಾಷ್ಟ್ರಪತಿಗಳಿಂದ ಹಿಡಿದು ಪ್ರಧಾನಿ ಮೋದಿಯವರು ಕೂಡ ಶ್ರವಣಬೆಳಗೊಳಕ್ಕೆ ಆಗಮಿಸಿ ಮಹಾಮಸ್ತಕಾಭಿಷೇಕಕ್ಕೆ ಶುಭ ಹಾರೈಸಿ ಹೋಗಿದ್ದರು. ಆದರೆ ಅವರು ಬೆಟ್ಟವನ್ನೇರಿ ಭಗವಾನ್ ಬಾಹುಬಲಿ ಸ್ವಾಮಿಯ ದರ್ಶನ ಮಾಡಿರಲಿಲ್ಲ. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯನವರು ಕಾಲ್ನಡಿಗೆಯಲ್ಲೇ ಬೆಟ್ಟ ಹತ್ತಿದ್ದು, ಇದೀಗ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಕೂಡಾ ಇಂದು ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟವನ್ನು ಹತ್ತಿದ್ದಾರೆ.

ಮೊದಲು ಭಗವಾನ್ ಬಾಹುಬಲಿ ಸ್ವಾಮಿಯ ಪಾದದ ಬಳಿಯಿಂದ ನಮಸ್ಕರಿಸಿ ಅಲ್ಲಿಂದ ಅಟ್ಟಣಿಗೆ ಏರಿದರು. ನಂತರ ಚಾರುಕೀರ್ತಿ ಸ್ವಾಮೀಜಿಯವರು ಜಲ ತುಂಬಿರುವ ಬೆಳ್ಳಿಯ ಕಲಶವನ್ನು ದೇವೆಗೌಡರಿಗೆ ನೀಡಿ ಭಗವಾನ್ ಬಾಹುಬಲಿ ಸ್ವಾಮಿಗೆ ಜಲಾಭಿಷೇಕ ಮಾಡಿಸಿದರು.

ಇವರೊಂದಿಗೆ ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿ, ಪತ್ನಿ ಶ್ರೀಮತಿ ಚೆನ್ನಮ ಮತ್ತು ಸಾಲು ಮರದ ತಿಮ್ಮಕ ಡೋಲಿಯಲ್ಲಿ ಬೆಟ್ಟವನ್ನೇರಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News