×
Ad

ಮೈಸೂರು: ಕೊಲೆ ಯತ್ನ ಆರೋಪಿಗಳಿಗೆ ಜೈಲು ಶಿಕ್ಷೆ

Update: 2018-02-24 22:33 IST

ಮೈಸೂರು,ಫೆ.24: ಹಳೆ ವೈಷಮ್ಯ ಹಿನ್ನೆಲೆ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈಯ್ಯಲು ಯತ್ನಿಸಿದ ಇಬ್ಬರು ಆರೋಪಿಗಳಿಗೆ ಜಿಲ್ಲಾ ಮೂರನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ, ತಲಾ 12ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

2016ರ ಫೆ.3ರಂದು ನಂಜನಗೂಡು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿನಡೆದ ಕೃತ್ಯದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್ ಸುಧೀಂದ್ರನಾಥ್  ಹರೀಶ್ ಮತ್ತು ಗಿರೀಶ್ ಎಂಬವರಿಗೆ ಈ ಆದೇಶ ನೀಡಿದ್ದಾರೆ.

ತಾಲೂಕಿನ ಹಳ್ಳದ ಕೇರಿಯಿಂದ ದೇವರಸನಹಳ್ಳಿಗೆ ದ್ವಿಚಕ್ರವಾಹನದಲ್ಲಿ ಸಾಗುತ್ತಿದ್ದ ಅನಿಲ್ ಕುಮಾರ್ ಹಾಗೂ ಕೃಷ್ಣ ಎಂಬವರನ್ನು ಹರೀಶ್ ಮತ್ತು ಗಿರೀಶ್ ಎಂಬವರು ತಡೆದಿದ್ದು, ಮಚ್ಚಿನಿಂದ ಅನಿಲ್ ಮೇಲೆ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದರು. ಈ ಕುರಿತು ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ 12ಸಾವಿರ ರೂ.ದಂಡವಿಧಿಸಿದ್ದು, ದಂಡವನ್ನು ಘಟನೆಯಲ್ಲಿ ಗಾಯಗೊಂಡಿದ್ದ ಅನಿಲ್ ಎಂಬವರಿಗೆ ಪರಿಹಾರ ರೂಪದಲ್ಲಿ ನೀಡುವಂತೆ ತಿಳಿಸಿದ್ದರು. ವಾಸಂತಿ ಎಂ.ಅಂಗಡಿ ಅವರು ಸರ್ಕಾರದ ಪರ ವಾದ ಮಂಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News