ಅಮೆರಿಕ ಜೊತೆಗೆ ಮಾತುಕತೆಗೆ ಮುಕ್ತ: ಉ.ಕೊರಿಯ

Update: 2018-02-25 16:46 GMT

ಸೋಲ್,ಫೆ.25: ಕೊರಿಯ ಪರ್ಯಾಯ ದ್ವೀಪದಲ್ಲಿ ಸಂಘರ್ಷವನ್ನು ಭುಗಿಲೆಬ್ಬಿಸಲು ವಾಶಿಂಗ್ಟನ್ ಯತ್ನಿಸುತ್ತಿದೆಯೆಂದು ಆರೋಪಿಸಿದ ಕೆಲವೇ ತಾಸುಗಳ ಬಳಿಕ ಉತ್ತರ ಕೊರಿಯವು ನೀಡಿದ ಇನ್ನೊಂದು ಹೇಳಿಕೆಯಲ್ಲಿ, ಅಮೆರಿಕದ ಜೊತೆ ಮಾತುಕತೆಗೆ ತಾನು ಮುಕ್ತನಾಗಿರುವುದಾಗಿ ತಿಳಿಸಿದೆ.

 ದಕ್ಷಿಣ ಕೊರಿಯದಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್‌ನ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ವ್ಯೊಂಗ್‌ಯಾಂಗ್ ಆಗಮಿಸಿರುವ ಉತ್ತರ ಕೊರಿಯದ ನಿಯೋಗದ ಹಿರಿಯ ಸದಸ್ಯರೊಬ್ಬರು ಅಮೆರಿಕದ ಜೊತೆ ಮಾತುಕತೆಯ ಒಲವು ವ್ಯಕ್ತಪಡಿಸಿದ್ದಾರೆ.

 ಉಭಯ ಕೊರಿಯ ದೇಶಗಳ ನಡುವಿನ ಬಾಂಧವ್ಯ ಸುಧಾರಣೆಯ ಜೊತೆಗೆ ಉತ್ತರ ಕೊರಿಯ ಹಾಗೂ ಅಮೆರಿಕದ ಬಾಂಧವ್ಯದಲ್ಲೂ ಬೆಳವಣಿಗೆಯಾಗಬೇಕೆಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

 ಒಲಿಂಪಿಕ್ ನಗರದಲ್ಲಿರುವ ಅಜ್ಞಾತ ಸ್ಥಳವೊಂದರಲ್ಲಿ ಉತ್ತರ ಕೊರಿಯದ ನಿಯೋಗವು ದಕ್ಷಿಣ ಕೊರಿಯ ಅಧ್ಯಕ್ಷ ಮೂನ್ ಜೆ ಯವರನ್ನು ಭೇಟಿಯಾಗಿರುವುದಾಗಿಯೂ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News