ಹನೂರು: ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ
ಹನೂರು,ಫೆ.26: ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಪಾಠ ಪ್ರವಚನದ ಜೊತೆಗೆ ವೈಜ್ಣಾನಿಕ ಚಿಂತನೆ ಮೂಡಿಸುವ ಕಡೆಗೆ ಹೆಚ್ಚು ಗಮನ ಹರಿಸಿ ಎಂದು ಶಿಕ್ಷಕರಿಗೆ ಕ್ಷೇತ್ರ ಶಿಕ್ಷಾಣಾದಿಕಾರಿ ಟಿ. ಆರ್ ಸ್ವಾಮಿ ಕರೆ ನೀಡಿದರು.
ಹನೂರು ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಅವಿಷ್ಕಾರ ಅಭಿಯಾನದ ಕಾರ್ಯಕ್ರಮದಡಿಯಲ್ಲಿ ಏರ್ಪಡಿಸಲಾದ ವಿಜ್ಞಾನ ವಸ್ತು ಪ್ರದರ್ಶನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹನೂರು ವಲಯದ ಬಹುತೇಕ ವಿಜ್ಞಾನ ಶಿಕ್ಷಕರು ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋಬಾವನೆ ಬೆಳಸುವಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಕೆಲವು ಶಾಲೆಗಳಲ್ಲಿ ಶಿಕ್ಷಕರು ವೈಜ್ಞಾನಿಕ ವಸ್ತುಗಳನ್ನು ಬಳಸದಿರುವುದರಿಂದ ಹಾಳಾಗಿ ಕೊಠಡಿಗಳಲ್ಲಿ ದೂಳು ಇಡಿಯುತ್ತಿದೆ. ಇದರಿಂದ ಮಕ್ಕಳಿಗೆ ವಿಜ್ಞಾನ ವಿಷಯದಲ್ಲಿ ಆಸಕ್ತಿ ಕುಗ್ಗುತ್ತಿದೆ. ಇದು ಬೇಸರದ ಸಂಗತಿಯಾಗಿದೆ. ಆದ್ದರಿಂದ ಶಿಕ್ಷಕರು ವಿಜ್ಞಾನ ಸಾಮಾಗ್ರಿಗಳನ್ನು ಸಮರ್ಪಕವಾದ ರೀತಿಯಲ್ಲಿ ಬಳಸಿ ಮಕ್ಕಳಿಗೆ ವಿಜ್ಞಾನಕ್ಕೆ ಸಂಬಂದಿಸಿದ ಪಾಠ ಪ್ರವಚನಗಳನ್ನು ಮಾಡುವುದರ ಜೊತೆಗೆ ವೈಜ್ಞಾನಿಕ ಚಿಂತನೆಗಳನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಿ ಎಂದರು.
ಸರ್ಕಾರಿ ಮಾದರಿ ಶಾಲೆಯಲ್ಲಿ ಆಯೋಸಿದ್ದ ರಾಷ್ಟ್ರೀಯ ಅವಿಷ್ಕಾರ ಅಭಿಯಾನದ ವಸ್ತು ಪ್ರದರ್ಶನ ಅತ್ಯುತ್ತಮವಾಗಿ ಆಯೋಜಿಸಿಲಾಗಿದ್ದು, ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಶಿವಲಿಂಗನಾಯಕ್ ಮತ್ತು ಶಿಕ್ಷಕವೃಂದದವರಿಗೆ ಅಭಿನಂದನೆ ತಿಳಿಸಿ ಅವರನ್ನು ಶ್ಲಾಘಿಸಿದರು
ನಂತರ ಮಾತನಾಡಿದ ಎ.ಪಿ.ಸಿ ಸೋಮಶೇಖರ್, ರಾಷ್ಟ್ರೀಯ ಅವಿಷ್ಕಾರ ಅಭಿಯಾನದ ಸಂಪೂರ್ಣ ವಿವರಣೆಯನ್ನು ನೀಡುತ್ತಾ ಯುವ ವಿಜ್ಞಾನಿಗಳನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಮೂಲ್ಯ ಮತ್ತು ಈ ವಸ್ತು ಪ್ರದರ್ಶನವನ್ನು ವಲಯದ ಸುತ್ತ ಮುತ್ತಲಿನ ಶಾಲೆಯ ಮಕ್ಕಳು ಸದುಪಯೋಗ ಪಡಿಸಿಕೂಳ್ಳುವಂತೆ ಮಾಡಿ ಎಂದರು.
ಇದೇ ಸಂದರ್ಭದಲ್ಲಿ ಪಪಂ ಅದ್ಯಕ್ಷೆ ಮಮತಾಮಹದೇವ್ ಬಿಆರ್ ಪಿಗಳಾದ ಆಶೋಕ್ , ಶ್ರಿನೀವಾಸ್‍ನಾಯ್ಡು, ಸಿಆರ್ ಪಿ ಗಳು ಮತ್ತು ಟಿಜಿಟಿ ಶಿಕ್ಷಕರು ಹಾಜರಿದ್ದರು.