×
Ad

'ಹೋಲಿ ಸೆಪುಲ್‌ಚೆರ್' ಚರ್ಚ್‌ ಮುಚ್ಚುಗಡೆ..!

Update: 2018-02-26 18:57 IST

ಇಸ್ರೇಲ್ ಆಡಳಿತದ ಕಠಿಣವಾದ ತೆರಿಗೆ ನಿಯಮಗಳು ಹಾಗೂ ಪ್ರಸ್ತಾಪಿತ ಆಸ್ತಿ ಕಾನೂನಿಗೆ ಪ್ರತಿಭಟನೆಯಾಗಿ, ಯೇಸುಕ್ರಿಸ್ತನ ಸಮಾಧಿ ಸ್ಥಳದ ಮೇಲೆ ನಿರ್ಮಿಸಲಾಗಿದೆಯೆಂದು ನಂಬಲಾಗಿರುವ 'ಹೋಲಿ ಸೆಪುಲ್‌ಚೆರ್' ಚರ್ಚ್‌ನ್ನು ಮುಚ್ಚುಗಡೆಗೊಳಿಸುವ ಅಪರೂಪದ ನಿರ್ಧಾರವನ್ನು ಸ್ಥಳೀಯ ಕ್ರೈಸ್ತ ನಾಯಕರು ಕೈಗೊಂಡಿದ್ದಾರೆ. ಜೆರುಸಲೇಂನಲ್ಲಿ ರವಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೆರುಸಲೇಂನ ಕ್ರೈಸ್ತ ನಾಯಕರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಆದರೆ ಎಷ್ಟು ಸಮಯದವರೆಗೆ ಚರ್ಚ್ ಮುಚ್ಚುಗಡೆಗೊಳ್ಳಲಿದೆಯೆಂಬ ಬಗ್ಗೆ ತಕ್ಷಣ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor