×
Ad

ಶ್ರವಣಬೆಳಗೊಳ: ಲಕ್ಷ್ಮೀದೇವಿ ಸಮುದಾಯಭವನ ಉದ್ಘಾಟನೆ ಕಾರ್ಯಕ್ರಮ

Update: 2018-02-26 23:16 IST

ಶ್ರವಣಬೆಳಗೊಳ,ಫೆ.26: ದೇವರಾಜು ಅರಸು ನಿಗಮದ ವತಿಯಿಂದ ನೀಡುವ ಸಾಲದ ಅನುದಾನ ಹೆಚ್ಚು ಫಲಾನುಭವಿಗಳಿಗೆ ನೀಡಬೇಕಾದರೆ ಸರ್ಕಾರ ಹೆಚ್ಚು ಹಣವನ್ನು ಬಿಡುಗಡೆ ಮಾಡಬೇಕೆಂದು ಶಾಸಕ ಸಿ.ಎನ್.ಬಾಲಕೃಷ್ಣ ಆಗ್ರಹಿಸಿದರು. 

ಅವರು ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಲಕ್ಷ್ಮೀದೇವಿ ಸಮುದಾಯಭವನ ಉದ್ಘಾಟಿಸಿ ಮಾತನಾಡುತ್ತಾ, ದೇವರಾಜು ಅರುಸುರವರ ಹೆಸರಿನಲ್ಲಿ ಸಾಲ ನೀಡುತ್ತಿರುವುದು ಸ್ವಾಹತಾರ್ಹವಾಗಿದೆ. ಆದರೆ ಇದನ್ನು ಇನ್ನೂ ಹೆಚ್ಚು ಫಲಾನುಭವಿಗಳಿಗೆ ನೀಡಬೇಕಾದರೆ ನಿಗಧಿಗೊಳಿಸಿದ ಸಾಲದ ಮೊತ್ತವನ್ನೂ ಹೆಚ್ಚಿಸಬೇಕು.  ದಡಿಘಟ್ಟ ಗ್ರಾಮದಲ್ಲಿ 12 ಲಕ್ಷ ವೆಚ್ಚದಲ್ಲಿ ಸಮುದಾಯ ಭವನವನ್ನು ನಿರ್ಮಾಣ ಮಾಡಲಾಗಿದ್ದು, ಅದರಲ್ಲಿ ಲೋಕಸಭಾ ಸದಸ್ಯರು ಹಾಗೂ ಶಾಸಕರು ಅನುದಾನದಲ್ಲಿ 7 ಲಕ್ಷ ಹಣ ನೀಡಿದ್ದು, ಅಡುಗೆ ಕೋಣೆ ಇನ್ನಿತರೆ ಕಟ್ಟಡಕ್ಕೆ ಶಾಸಕರ ಅನುದಾನದಲ್ಲಿ ಮುಂದಿನ ದಿನದಲ್ಲಿ 3 ಲಕ್ಷ ಹಣ ನೀಡಲಾಗುತ್ತದೆ ಎಂದರು. 

ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಸವಿತಾ ಸಮಾಜಕ್ಕೆ ನಿವೇಶನ ನೀಡಿದ್ದು, ಮುಂದಿನ ಮಾರ್ಚಿ ಒಳಗಡೆ ಸುಂದರ ಕಟ್ಟಡ ನಿರ್ಮಿಸಲಾಗುತ್ತದೆ. ಉತ್ತಮ ಕೆಲಸ ಮಾಡಬೇಕಾದರೆ ಸಂಘಟನೆ ಮುಖ್ಯವಾಗುತ್ತದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಎಲ್ಲ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. 
ದಢಿಘಟ್ಟ ಗ್ರಾಮದಲ್ಲಿ 1 ಕೋಟಿ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿದೆ. ಹಳ್ಳಿಗಳ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ. ಆದ್ದರಿಂದ ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು. 

ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಪರಮ ದೇವಾರಾಜೇಗೌಡ, ಹಾಸನ ಸವಿತಾ ಸಮಾಜ ಜಿಲ್ಲಾಧ್ಯಾಕ್ಷ ಬಿ.ಪಿ.ನಾಗೇಶ್, ಚನ್ನರಾಯಪಟ್ಟಣ ಸವಿತಾ ಸಮಾಜ ತಾಲೂಕಾಧ್ಯಕ್ಷ ಎ.ಸಿ.ಪುನೀತ್, ಚನ್ನರಾಯಪಟ್ಟಣ ಸವಿತಾ ಸಮಾಜ ತಾಲೂಕು ಪ್ರತಿನಿಧಿ ಆನಂದ್, ಹಾಸನ ಸವಿತಾ ಸಮಾಜ ಜಿಲ್ಲಾ ಉಪಾಧ್ಯಕ್ಷ ನಿಂಗರಾಜು, ಹಾಸನ ಸವಿತಾ ಸಮಾಜ ಜಿಲ್ಲಾ ನಿರ್ಧೇಶಕ ಗಣೇಶ್, ಗೌರವಾಧ್ಯಕ್ಷ ತ್ಯಾಗರಾಜ, ಚನ್ನರಾಯಪಟ್ಟಣ ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿ ಸಿ.ಆರ್.ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News