ಬ್ರೈನೋಬ್ರೈನ್ ಮಡಿಕೇರಿ ಕೇಂದ್ರಕ್ಕೆ ಪ್ರಶಸ್ತಿಯ ಗರಿ
Update: 2018-02-26 23:29 IST
ಮಡಿಕೇರಿ ಫೆ.26: ಮಡಿಕೇರಿಯ ಬ್ರೈನೋಬ್ರೈನ್ ಅಬಾಕಸ್ ಕೇಂದ್ರಕ್ಕೆ ರಾಜ್ಯದಲ್ಲೇ ಅತ್ಯುತ್ತಮ ಕೇಂದ್ರ ಎಂಬ ಪ್ರಶಸ್ತಿ ಲಭಿಸಿದೆ. ಇತ್ತೀಚೆಗೆ ನಗರದ ಹೊಟೇಲ್ ಕೂರ್ಗ್ ಇಂಟರ್ ನ್ಯಾಷನಲ್‍ನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಬ್ರೈನೋಬ್ರೈನ್ ಕರ್ನಾಟಕ ವಲಯ ನಿರ್ದೇಶಕರಾದ ಆರ್.ರಾಮಕೃಷ್ಣ ಅವರಿಂದ ಕೇಂದ್ರದ ಮುಖ್ಯಸ್ಥರಾದ ಮಾಪಂಗಡ ಕವಿತಾ ಕರುಂಬಯ್ಯ ಈ ಪ್ರಶಸ್ತಿ ಸ್ವೀಕರಿಸಿದರು.
ಕಳೆದ 15 ವರ್ಷಗಳಲ್ಲಿ ರಾಜ್ಯದ 50 ಕೇಂದ್ರಗಳಿಂದ ಒಟ್ಟು 1643 ವಿದ್ಯಾರ್ಥಿಗಳು ಬ್ರೈನೋಬ್ರೈನ್ ಪದವಿ ಪಡೆದಿದ್ದು ಇದರಲ್ಲಿ ಅತೀ ಹೆಚ್ಚಿನ 370 ಮಕ್ಕಳಿಗೆ ಪದವಿ ನೀಡಿರುವ ಹೆಗ್ಗಳಿಕೆಗೆ ಮಡಿಕೇರಿ ಬ್ರೈನೋಬ್ರೈನ್ ಕೇಂದ್ರ ಪಾತ್ರವಾಗಿದೆ.