ಹಿರಿಯ ಸಾಹಿತಿ ತು.ರಾ.ಸುಂದರಾಜು

Update: 2018-02-27 11:55 GMT

ತುಮಕೂರು,ಫೆ.27: ತುಮಕೂರು ಜಿಲ್ಲೆಯ ಜಿಲ್ಲಾ ಖಜಾನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ತು.ರಾ.ಸುಂದರಾಜು ಸೋಮವಾರ ಬೆಳಗ್ಗೆ ಸಿದ್ದಗಂಗಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಶ್ರೀಯುತರು ತು.ರಾ.ಸು ಎಂಬ ನಾಮಾಂಕಿತದಲ್ಲಿ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದು, 4 ಕವನ ಸಂಕಲನಗಳನ್ನು ಹೊರತಂದಿರುತ್ತಾರೆ. ಜಿಲ್ಲೆಯ ಗುಬ್ಬಿ ತಾಲೂಕು ಖಜಾನೆ ಸೇರಿದಂತೆ ಇತರೆಡೆಗಳಲ್ಲಿ ಸೇವೆಸಲ್ಲಿಸಿ ಜಿಲ್ಲಾ ಖಜಾನಾಧಿಕಾರಿಯಾಗಿ ನಿವೃತ್ತರಾದರು. ಸರಕಾರಿ ನೌಕರರಿಗೆ ಇಲಾಖೆಯ ಪರೀಕ್ಷೆಗಳ ಬಗ್ಗೆ ಉಚಿತವಾಗಿ ಸರಕಾರಿ ನೌಕರರ ಸಂಘದ ವತಿಯಿಂದ ಬೋಧನೆ ಮಾಡುತ್ತಿದ್ದರು. ಕೆಸಿಎಸ್‍ಆರ್ ಮತ್ತು ಹಣಕಾಸಿ ನಿರ್ವಹಣಾ ವಿಷಯಗಳಲ್ಲಿ ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ರಾಜ್ಯ ಸರಕಾರದ ವೇತನ ಆಯೋಗದ ಸಲಹಾ ಸಮಿತಿಯ ಸದಸ್ಯರಾಗಿ ಕೂಡ ಕೆಲಸ ನಿರ್ವಹಿಸಿದ್ದಾರೆ.

ನಿವೃತ್ತಿಯಾದ ನೌಕರರಿಗೆ ಕಾನೂನು ಪರಿಣಿತಿಯಲ್ಲಿ ಪಿಂಚಣಿ ಹಾಗೂ ಹಣಕಾಸು ವ್ಯವಹಾರ ವಿಚಾರದಲ್ಲಿ ಪರಿಣಿತಿ ಹೊಂದಿ ಸಲಹೆಗಾರರಾಗಿದ್ದಾರೆ. ಇವರ ಕವನಗಳಲ್ಲಿ ಚಿದಂಬರ, ಕತ್ತಲು ಹಡೆದ ಬೆಳಕು, ಹೃದಯದಿಂದ ಹೃದಯಕ್ಕೆ ಇನ್ನೀತರೆ ಹಲವು ಕೃತಿಗಳು ಪ್ರಕಟಗೊಂಡಿವೆ. ಪದವಿಯ ಜೊತೆಗೆ ಕಾನೂನು ಪದವಿಯನ್ನು ಮುಗಿಸಿ, ಕಾನೂನಿನ ಅರಿವುಳ್ಳವರಾಗಿ ದ್ವೀತಿಯ ದರ್ಜೆ ಸಹಾಯಕರಾಗಿ ಸರಕಾರಿ ನೌಕರಿ ಆರಂಭಿಸಿ ಜಿಲ್ಲಾ ಖಜಾನಾಧಿಕಾರಿಯ ಹುದ್ದೆಗೆ ಏರಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಇನ್ನೀತರೆ ಪ್ರಶಸ್ತಿಗಳು ಇವರ ಮುಡಿಗೇರಿವೆ. ಮೂಲತಃ ತಮಿಳು ಭಾಷಿಕರಾದ ಇವರು ಕನ್ನಡದೆಡೆಗಿನ ಒಲುವಿನಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಅಂತ್ಯಕ್ರಿಯೆ ಚಿಕ್ಕಪೇಟೆಯ ಗಾರ್ಡನ್ ರೋಡ್‍ನ ರುದ್ರಭೂಮಿಯಲ್ಲಿ ಮಧ್ಯಾಹ್ನ 3ಗಂಟೆಗೆ ನೆರವೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಎಂ. ಅಹ್ಮದ್
ವೀಣಾ ರಾವ್
ಖತೀಜಮ್ಮ