×
Ad

ಮಡಿಕೇರಿ: ಮುಸ್ಲಿಂ ಒಕ್ಕೂಟದಿಂದ ಮಾ.25 ರಂದು ಸಾಮೂಹಿಕ ವಿವಾಹ

Update: 2018-02-27 23:17 IST

ಮಡಿಕೇರಿ ಫೆ.27: ಕೊಡಗು ಮುಸ್ಲಿಂ ಒಕ್ಕೂಟದ ವಾಟ್ಸ್ಆಪ್ ಗ್ರೂಪ್ ವತಿಯಿಂದ ಮಾ. 25 ರಂದು ಎರಡನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.
 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಕೆ.ಹೆಚ್.ಮೊಹಮ್ಮದ್ ರಾಫಿ ಮಾ.25 ರಂದು ಚೆರಿಯಪರಂಬುವಿನ ಶಾದಿ ಮಹಲ್‍ನಲ್ಲಿ ಕೊಡಗಿನ ಮೂರು ಬಡ ಹೆಣ್ಣು ಮಕ್ಕಳ ವಿವಾಹ ನಡೆಯಲಿದೆ ಎಂದರು. ಕಳೆದ ವರ್ಷ ದಾನಿಗಳ ಸಹಾಯದಿಂದ ಸಿದ್ದಾಪುರದ ಸ್ವರ್ಣಮಾಲಾ ಸಭಾಂಗಣದಲ್ಲಿ ಎರಡು ಬಡ ಹೆಣ್ಣು ಮಕ್ಕಳ ವಿವಾಹ ಮಾಡಲಾಗಿದೆ ಎಂದು ತಿಳಿಸಿದರು. 

ಹೆಣ್ಣು ಮಕ್ಕಳಿಗೆ ಐದು ಪವನ್ ಚಿನ್ನ, ಬಸ್ ಹಾಗೂ ಊಟದ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.  

ಕೊಡಗು ಮುಸ್ಲಿಂ ಒಕ್ಕೂಟದ ವಾಟ್ಸ್ಆಪ್ ಗ್ರೂಪ್ ರಾಜಕೀಯ ರಹಿತವಾದ ಸಂಘಟನೆಯಾಗಿದ್ದು, ಸಾಮರಸ್ಯ ಸಾರುವ ಜೊತೆಗೆ  ನೊಂದವರ ಪಾಲಿಗೆ ಆಶಾಕಿರಣವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಕೆ.ಹೆಚ್.ಮೊಹಮ್ಮದ್ ರಾಫಿ ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ 9141723577, 8861684872 ಸಂಪರ್ಕಿಸಬಹುದಾಗಿದೆ.

ಸುದ್ದಿಗೋಷ್ಠಿಯಲ್ಲಿ ವಿರಾಜಪೇಟೆ ತಾಲೂಕಿನ ಅಧ್ಯಕ್ಷರಾದ ಸರ್ಫುದ್ದೀನ್, ಹಾಗೂ ಮಡಿಕೇರಿ ತಾಲೂಕು ಅಧ್ಯಕ್ಷರಾದ ಅಬ್ದುಲ್ ರಜಾóಕ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News