ಮಂಡ್ಯ: ಎಂ.ಸಿದ್ದರಾಮು ವಿಜ್ಞಾನ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

Update: 2018-02-27 18:22 GMT

ಮಂಡ್ಯ, ಫೆ.27: ಕರ್ನಾಟಕ ಸಂಘದ ವತಿಯಿಂದ ಎಂ.ಎಲ್. ಶ್ರೀಕಂಠೇಶಗೌಡ ಸಂಶೋಧನಾ ಕೇಂದ್ರದ ಆವರಣದಲ್ಲಿ ಮಂಗಳವಾರ ಶಿಕ್ಷಕ ಸಿ.ಶಿವರಾಮು ಅವರಿಗೆ ನಿವೃತ್ತ ಅಧ್ಯಾಪಕ ಶಂಕರೇಗೌಡ ಎಂ.ಸಿದ್ದರಾಮು ವಿಜ್ಞಾನ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿದರು.

ಅಭಿನಂದನಾ ಭಾಷಣ ಮಾಡಿದ ಎಲೆಚಾಕನಹಳ್ಳಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಡಾ.ಎಸ್.ಸಿ. ಮಂಗಳ, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಅಭಿಯಂತರರು ನಿರ್ಲಕ್ಷ್ಯ ವಹಿಸಿದಲ್ಲಿ ಒಂದು ಕಟ್ಟಡ ಬಿದ್ದುಹೋಗುತ್ತದೆ. ವೈದ್ಯರ ನಿರ್ಲಕ್ಷದಿಂದ ಒಂದು ಪ್ರಾಣ ಹೋಗುತ್ತೆ. ಆದರೆ, ಶಿಕ್ಷಕರು ಬೇಜವಾಬ್ದಾರಿಯಿಂದ ನಡೆದುಕೊಂಡಲ್ಲಿ ಇಡೀ ಸಮೂಹವೇ ಹಾಳಾಗುತ್ತದೆ ಎಂಬುದನ್ನು ಎಲ್ಲರೂ ಮನಗಾಣಬೇಕಾಗಿದೆ ಎಂದರು. 

ಬದುಕು ದೀರ್ಘಾವಧಿಯಲ್ಲ. ಜೀವನದಲ್ಲಿ ಹುಟ್ಟು-ಸಾವು ನಡುವಿನ ಬದುಕೇ ಒಂದು ಅವಕಾಶ. ಅದನ್ನು ವರ ಅಥವಾ ಶಾಪವಾಗಿಯೂ ಮಾಡಿಕೊಳ್ಳಬಹುದು. ಅದು ನಮ್ಮ ಕೈಯ್ಯಲ್ಲೇ ಇದೆ. ಇಂತಹ ಸಂದರ್ಭದಲ್ಲಿ ನಮ್ಮೊಡನೆ ಯಾರಿದ್ದಾರೆ, ನನ್ನ ಅವಕಾಶಗಳನ್ನು ಹೇಗೆ ಸದುಪಯೋಗಪಡಿಸಿಕೊಳ್ಳುತ್ತೇನೆ ಎಂಬುದು ಮುಖ್ಯ ಎಂದು ಅವರು ಹೇಳಿದರು. 

ಮನಸ್ಸುಗಳನ್ನು ಕಟ್ಟುವ ಕೆಲಸದಲ್ಲಿ ಯಾವ ರೀತಿ ಶಿಕ್ಷಣ ಕೊಡಬೇಕು ಎಂಬುದನ್ನು ಮೊದಲು ಅರಿಯಬೇಕು. ಶಿಕ್ಷಣದ ನೆಲೆಗಟ್ಟಿನಲ್ಲಿ ಬೇರೆ ಬೇರೆ ವಿಧಾನದಲ್ಲೂ ಕಟ್ಟಬಹುದು. ಶಿಸ್ತು, ಕ್ಷಮೆ, ಸಹನೆಯಿಂದ ಕಲಿಸುವವನೇ ನಿಜವಾದ ಶಿಕ್ಷಕ ಎಂದು ಅವರು ತಿಳಿಸಿದರು. 

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶಗೌಡ ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿ ಎಸ್.ಗುಣಸಾಗರಿ ಸಿ.ನಾಗರಾಜು, ಉಪನ್ಯಾಸಕ ಎಸ್.ಸುದೀಪ್‍ಕುಮಾರ್, ಎಂ.ಕೆ. ಹರೀಶ್‍ಕುಮಾರ್, ಪಿ.ಲೋಕೇಶ್  ಇತರರು ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News