ಶಿವಮೊಗ್ಗ; ಹುಲಿ ಪ್ರತ್ಯಕ್ಷ ; ನಾಗರಿಕರಲ್ಲಿ ಆತಂಕ
Update: 2018-02-28 21:26 IST
ಶಿವಮೊಗ್ಗ, ಫೆ. 28: ಜಿಲ್ಲೆಯ ಸಾಗರ ತಾಲೂಕಿನ ಭೀಮನಕೋಣೆಗೆ ಹೋಗುವ ಯಲಗಳಲೆ ಗ್ರಾಮದ ಸಮೀಪ ಮಂಗಳವಾರ ರಾತ್ರಿ ಹುಲಿಯೊಂದು ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕ ಮೂಡಿಸಿದೆ.
ಹುಲಿಯು ರಾತ್ರಿ 9 ಗಂಟೆ ಸುಮಾರಿಗೆ ಯಲಗಳಲೆ ಗ್ರಾಮ ಸಮೀಪದ ಐಸಿರಿ ಅಡಕೆ ತೋಟದ ಮೂಲಕ ರಸ್ತೆಯನ್ನು ದಾಟಿ ಸಮೀಪದ ಕಾಡಿನತ್ತ ಸಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ರಾತ್ರಿ ಈ ಮಾರ್ಗದಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ಕಾರು ಚಾಲಕರೋರ್ವರು, ರಸ್ತೆಯಲ್ಲಿ ಸಾಗುತ್ತಿದ್ದ ಹುಲಿಯನ್ನು ಗಮನಿಸಿ ತಮ್ಮ ಮೊಬೈಲ್‍ನಲ್ಲಿ ಅದರ ಫೋಟೋ ಸೆರೆ ಹಿಡಿದಿದ್ದಾರೆ. ಹುಲಿಯು ಭೀಮನಕೋಣೆ ಹಾಗೂ ಹೆಗ್ಗೋಡು ಭಾಗದ ಕಾಡನ್ನು ಪ್ರವೇಶಿಸಿದೆ ಎಂದು ಹೇಳಲಾಗುತ್ತಿದೆ.
ಹುಲಿಯ ಓಡಾಟದ ವಿವರವು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾಕಷ್ಟು ಆತಂಕ ಉಂಟು ಮಾಡಿದೆ. ತಕ್ಷಣವೇ ಅರಣ್ಯ ಇಲಾಖೆಯು ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.