ಮೈಸೂರು; ಮುಡಾದ 23 ಬಡವಾಣೆಗಳು ಮಹಾನಗರ ಪಾಲಿಕೆಗೆ ಹಸ್ತಾಂತರ
Update: 2018-02-28 21:37 IST
ಮೈಸೂರು,ಫೆ.28: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 23 ಬಡವಾಣೆಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 23ಬಡಾವಣೆಗಳನ್ನು ಅಧಿಕಾರಿಗಳು ಪಾಲಿಕೆಗೆ ಹಸ್ತಾಂತರಿಸಿದರು. ಮುಡಾ ವ್ಯಾಪ್ತಿಗೆ ಬರುವ 27 ಬಡಾವಣೆಗಳನ್ನು ಪರಿಶೀಲಿಸಿದ ಅಧಿಕಾರಿಗಳು ಚರ್ಚೆ ನಡೆಸಿ 23 ಬಡಾವಣೆ ಗಳನ್ನು ಮೈಸೂರು ಪಾಲಿಕೆ ವ್ಯಾಪ್ತಿಗೆ ಬರುವಂತೆ ಮಾಡಿದರು.
ಜಿಲ್ಲಾಧಿಕಾರಿ ಡಿ.ರಂದೀಪ್ ಮೈಸೂರಿನ ಪ್ರತಿ ವಲಯಗಳಿಗೆ ಸಂಬಂಧಿಸಿದಂತೆ ಪಾಲಿಕೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಪಾಲಿಕೆಯಲ್ಲಿ ಕೈಗೊಳ್ಳಲಾದ ಹಲವು ಅಭಿವೃದ್ಧಿಕಾರ್ಯಗಳ ವಿವರ ಪಡೆದರು.
ಈ ಸಂದರ್ಭ ಪಾಲಿಕೆಯ ಆಯುಕ್ತ ಜಿ.ಜಗದೀಶ್, ಮುಡಾ ಆಯುಕ್ತ ಕಾಂತರಾಜು ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.