ಮಹದಾಯಿ ಬಗ್ಗೆ ಪ್ರಧಾನಿ ಮಾತನಾಡುವರೆಂದು ನಂಬಿಕೆ ಇಟ್ಟಿದ್ದ ರೈತರಿಗೆ ನಿರಾಸೆಯಾಗಿದೆ: ಡಿ. ಬಸವರಾಜ್

Update: 2018-02-28 18:07 GMT

ದಾವಣಗೆರೆ,ಫೆ.28: ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಗರದಲ್ಲಿ ಹಮ್ಮಿಕೊಂಡಿದ್ದ ರೈತರ ಸಮಾವೇಶದಲ್ಲಿ ರೈತರ ಸಾಲಮನ್ನಾ ಹಾಗೂ ಮಹದಾಯಿ ಕುಡಿಯುವ ನೀರು ಯೋಜನೆ ಜಾರಿ ಬಗ್ಗೆ ಪ್ರಧಾನಿ ಮೋದಿ ಮಾತನಾಡುವರೆಂದು ನಂಬಿಕೆ ಇಟ್ಟಿದ್ದ ರೈತರಿಗೆ ನಿರಾಸೆಯಾಗಿದೆ. ಮೋದಿ ಈ ಕುರಿತು ಪ್ರಸ್ತಾಪವನ್ನೇ ಮಾಡಲಿಲ್ಲ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್ ಟೀಕಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ತಮ್ಮ ಭಾಷಣದುದ್ದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬಗ್ಗೆ ಟೀಕೆ ಮಾಡುವ ಮೂಲಕ ರೈತರ ಸಮಾವೇಶಕ್ಕೆ ಆರ್ಥವಿಲ್ಲದಂತೆ ಪ್ರಧಾನಿ ಮೋದಿ ನಡೆದು ಕೊಂಡಿದ್ದಾರೆ. ಪ್ರಧಾನ ಮಂತ್ರಿಯಂತಹ ದೇಶದ ಉನ್ನತ ಸ್ಥಾನದಲ್ಲಿ ಇರುವ ಮೋದಿಯವರು ಯಾವುದೇ ದಾಖಲೆ ಇಲ್ಲದೆ ಕಮಿಷನ್ ಸರ್ಕಾರ ಎಂದು ಸುಳ್ಳು ಆರೋಪ ಮಾಡುವುದು ಅವರ ಸ್ಥಾನಕ್ಕೆ ತಕ್ಕುದ್ದಲ್ಲ ಎಂದಿರುವ ಅವರು, ಈ ಆರೋಪಗಳು ಕೇವಲ ಓಟಿಗಾಗಿ ಮಾಡುವ ಸುಳ್ಳು ಆರೋಪಗಳಾಗಿವೆಂದು ಲೇವಡಿ ಮಾಡಿದ್ದಾರೆ.

ಕರ್ನಾಟಕದ ಜನರಿಗೆ ಸಿದ್ದರಾಮಯ್ಯನವರ ಬಗ್ಗೆ ದ್ವೇಷವಿಲ್ಲ. ಸಿದ್ದರಾಮಯ್ಯನವರನ್ನು ರಾಜ್ಯದ ಜನತೆ ಪ್ರೀತಿಯಿಂದ ಕಾಣುತ್ತಿದ್ದಾರೆ. ಸಿದ್ದರಾಮಯ್ಯನವರನ್ನು ದ್ವೇಷಿಸುವವರು ಪ್ರಧಾನ ಮಂತ್ರಿ ಮೋದಿ, ಬಿ.ಎಸ್. ಯಡಿಯೂರಪ್ಪ, ಅಮಿತ್‍ಷಾ ಮತ್ತು ಬಿಜೆಪಿ ಮಾತ್ರ ಎಂದಿರುವ ಅವರು, ಇಂದು ಪ್ರಧಾನಿ ಸಮಾರಂಭದಲ್ಲಿ ಮುಷ್ಠಿ ಅಕ್ಕಿ ಕಾರ್ಯಕ್ರಮದಲ್ಲಿ ಪಡೆದ ಅಕ್ಕಿಯೂ ಸಿದ್ದರಾಮಯ್ಯ ಜನತೆಗೆ ನೀಡಿದ ಅನ್ನಭಾಗ್ಯದ ಅಕ್ಕಿ ಎಂದು ಅವರು ಗೇಲಿ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News