×
Ad

ಹನೂರು : ಒಕ್ಕಲಿಗ ಸಮುದಾಯ ಭವನಕ್ಕೆ ಶಿಲಾನ್ಯಾಶ

Update: 2018-03-01 18:24 IST

ಹನೂರು,ಮಾ.1 : ಸಮುದಾಯ ಭವನಗಳು ಸ್ವಾಬಿಮಾನದ ಸಂಕೇತವಾಗಿದ್ದು, ಇದು ಸಮಾಜದ ಬಹುದೂಡ್ಡ ಆಸ್ತಿಯಾಗಿದೆ. ಸಮುದಾಯ ಭವನಗಳ ಮೂಲಕ ಸಮಾಜದ ಅಭಿವೃದ್ದಿಯಾಗುತ್ತದೆ ಎಂದು ಸಂಸದ ಆರ್. ಧ್ರುವನಾರಾಯಣ್ ತಿಳಿಸಿದರು.
ಹನೂರು ಪಟ್ಟಣದಲ್ಲಿ ಸುಮಾರು 2.50 ಕೋಟಿ ವೆಚ್ಚದಲ್ಲಿ ಒಕ್ಕಲಿಗ ಸಮುದಾಯ ಭವನಕ್ಕೆ ಶಿಲಾನ್ಯಾಶ ಕಾರ್ಯಕ್ರಮ ನೆರವೇರಿಸಿದರು.

ಸಮುದಾಯ ಭವನಗಳ ಮೂಲಕ ಸಮಾಜದ ಅಭಿವೃದ್ದಿಯಾಗುತ್ತದೆ ಎಂದು ಮನಗಂಡು ಸಿದ್ದರಾಮಯ್ಯ ನೇತೃತ್ವದ ಸರ್ಕಾರ  ಹೆಚ್ಚು ಹೆಚ್ಚು ಸಮುದಾಯ ಭವನಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ಕೂಟ್ಟಿದೆ. ಅದೇ ರೀತಿ ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಸಮುದಾಯಕ್ಕೆ ಸರ್ಕಾರದಿಂದ 140ಕ್ಕೂ ಹೆಚ್ಚು ಸಮುದಾಯ ಭವನಗಳು ಮಂಜೂರಾಗಿ ಅನೇಕ ಭವನಗಳು ಉದ್ಘಾಟನೆಗಳಾಗಿವೆ, ಇನ್ನೂ ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ. ಆದುದರಿಂದ  ಭವನಗಳು ಮದುವೆ, ಶುಭ ಸಮಾರಂಭಗಳಿಗೆ ಮಾತ್ರ ಸೀಮಿತವಾಗದೇ ಶೈಕ್ಷಣಿಕ ಚಟುವಟಿಕೆಗಳ ಕೇಂದ್ರಗಳಾಗಬೇಕು ಎಂದು ತಿಳಿಸಿದರು. 

ಶಾಸಕ ಆರ್. ನರೇಂದ್ರ ಮಾತನಾಡಿ, ಪಟ್ಟಣದಲ್ಲಿ ಸುಸಜ್ಜಿತವಾಗಿ ಒಕ್ಕಲಿಗ ಸಮುದಾಯಭವನವನ್ನು ನಿರ್ಮಿಸಲು ಹಲವಾರು ವರ್ಷಗಳಿಂದ ಬೇಡಿಕೆ ಇತ್ತು, ಅದರ ನಿರ್ಮಾಣಕ್ಕೆ ಇಂದು ಚಾಲನೆ ನೀಡಿಲಾಗಿದ್ದು, ಸಮುದಾಯದ ಅಭಿವೃದ್ದಿ ವಿಚಾರದಲ್ಲಿ ಎಲ್ಲರು ಸಹ ಒಗ್ಗಟ್ಟಾಗಿ ಅಭಿವೃದ್ದಿಗೆ ಸಹಕರಿಸಿ ಮತ್ತು  ಕಾಮಗಾರಿಯೂ ಗುಣಮಟ್ಟದದಿಂದ ಕೂಡಿರುವಂತೆ ಗುತ್ತಿಗೆದಾರರಿಗೆ ಸೂಚಿಸಿ ಮತ್ತು ಸ್ಥಳೀಯರು ಸಹಕಾರ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಚಾಮುಲ್ ಅದ್ಯಕ್ಷ ಗುರುಮಲ್ಲಪ್ಪ, ರಾಜ್ಯ ಹಡಗು ಮತ್ತು ಬಂದರು ಅದ್ಯಕ್ಷ ವೆಂಕಟೇಶ್ ಜಿಪಂ ಸದಸ್ಯೆ ಲೇಖಾರವಿಕುಮಾರ್  ಸದಸ್ಯರಾದ ಬಸವರಾಜು, ತಾ.ಪಂ. ಅಧ್ಯಕ್ಷ ಆರ್. ರಾಜು, ಪ.ಪಂ ಅದ್ಯಕ್ಷ ಮಮತಾ ಮಹದೇವ್, ಉಪಾಧ್ಯಕ್ಷ ಬಸವರಾಜು, ಸದಸ್ಯ ಹಾಗೂ ಮಾಜಿ ಅದ್ಯಕ್ಷ ರಾಜೂಗೌಡ, ಬಾಲರಾಜನಾಯ್ಡು ನಾಮ ನಿರ್ದೇಶಕ ಜಯಪ್ರಕಾಶ್‍ಗುಪ್ತ. ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಕೆಂಪಯ್ಯ, ಎಪಿಎಂಸಿ ನಿರ್ದೇಶಕ ಮಾದೇಶ್, ಮುಖಂಡರಾದ ಮಂಗಲ ಪುಟ್ಟರಾಜು, ವೆಂಕರಮಣನಾಯ್ಡು  ಚಿಕ್ಕತಮ್ಮೇಗೌಡ, ರಾಜು, ಮಹೇಶ್, ಪ್ರಕಾಶ್, ನಂಜಂಡೇಗೌಡ ಮತ್ತು ಒಕ್ಕಲಿಗ ಯುವ ಸಮಿತಿ ಪದಾಧಿಕಾರಿಗಳಾದ ಸತೀಶ್, ಚೇತನ್, ಪ್ರವೀಣ್, ಮಂಜು ಇನ್ನಿತರರು ಹಾಜರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News