ಕೊಳ್ಳೇಗಾಲ : ಈಜಲು ತೆರಳಿದ ವಿದ್ಯಾರ್ಥಿ ನೀರುಪಾಲು
Update: 2018-03-01 18:29 IST
ಕೊಳ್ಳೇಗಾಲ,ಮಾ.1:ಇಲ್ಲಿನ ಸಮೀಪದ ಶಿವನ ಸಮುದ್ರ ಬಳಿಯಲ್ಲಿ ಇರುವ ಕಾವೇರಿ ನದಿಯಲ್ಲಿ ಈಜಲು ಹೋಗಿ ವಿದ್ಯಾರ್ಥಿ ಸಾವನ್ನಪಿದ್ದಾನೆ.
ಮೈಸೂರಿನ ಕೆ.ಜಿ.ಕೊಪ್ಪಲು ನಿವಾಸಿ ಹರ್ಷ(21) ಮೈಸೂರಿನಲ್ಲಿ ಡಿಪ್ಲೋಮ ವಿದ್ಯಾಭ್ಯಾಸ ಮಾಡುತ್ತಿದ್ದ ಈತ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ. ಈ ಸಂದರ್ಭದಲ್ಲಿ ನದಿಯ ನೀರನ್ನು ನೋಡಿ ಈಜಲು ಹೋಗಿ ಮೃತಪಟ್ಟಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಿಪಿಐ ರಾಜಣ್ಣ ನುರಿತ ಈಜುಗಾರರ ಸಹಾಯದಿಂದ ಶವವನ್ನು ಮೇಲೆತ್ತಿದ್ದಾರೆ. ಉಪ ವಿಭಾಗ ಆಸ್ಪತ್ರೆಯಲ್ಲಿ ಶವಗಾರ ಪರೀಕ್ಷೆ ನಂತರ ಸಂಬಂಧ ಪಟ್ಟವರಿಗೆ ಶವವನ್ನು ನೀಡಿದರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.