ಹನೂರು : ಹಲವು ಅಭಿವೃದ್ದಿ ಕಾಮಗಾರಿಗಳಿಗೆ ಶಿಲಾನ್ಯಾಸ

Update: 2018-03-01 17:21 GMT

ಹನೂರು,ಮಾ.1: ಹನೂರು  ಕ್ಷೇತ್ರ ವ್ಯಾಪ್ತಿಯಲ್ಲಿ  ಹಲವು ಅಭಿವೃದ್ದಿ ಕಾಮಗಾರಿಗಳಿಗೆ ಇಂದು ಸಂಸದ ಆರ್ ದ್ರುವ್‍ನಾರಯಣ್ ಶಂಕು ಸ್ಥಾಪನೆ ನೇರವೇರಿಸಿದರು.

ನಂತರ ಮಾತನಾಡಿದ ಸಂಸದ ಆರ್ ದ್ರವನಾರಯಣ್, ಜಿಲ್ಲೆಯಲ್ಲಿ ಈಗಾಗಲೇ  ಕುರಟ್ಟಿಹೂಸರು ಚಾಮರಾಜನಗರ ಟೌನ್ ಬಣಿಜಿಗ( ಬಲಿಜ) ಸಮುದಾಯ ಭವನದ ಕಾಮಗಾರಿಯು ನಿರ್ಮಾಣ ಪ್ರಗತಿ ಹಂತದಲ್ಲಿದ್ದು ಇಂದು ಹನೂರು ಸಮೀಪದ ಎಲ್ಲೆಮಾಳ ಗ್ರಾಮದಲ್ಲಿ ಬಲಜಿಗ ಹೆಚ್ಚು ವಾಸಿಸುವ ಈ ಗ್ರಾಮದಲ್ಲಿ ಸುಮಾರು 55 ಲಕ್ಷ ವೆಚ್ಚದಲ್ಲಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು,  ಈ ಸಮುದಾಯ ಭವನಗಳು ಮದುವೆ, ಶುಭ ಸಮಾರಂಭಗಳಿಗೆ ಮಾತ್ರ ಸೀಮಿತವಾಗದೇ ಶೈಕ್ಷಣಿಕ ಚಟುವಟಿಕೆಗಳ ಕೇಂದ್ರಗಳಾಗಬೇಕು ಎಂದರು 

ರಾಜ್ಯ ಬಣ್ಣ ಮತ್ತು ಹಡಗು ಕಾರ್ಖಾನೆ ಅದ್ಯಕ್ಷ ವೆಂಕಟೇಶ್ ಮಾತನಾಡಿದ ರಾಜ್ಯದ ಗಡಿ ಭಾಗದಲ್ಲಿ ಬಲಿಜ ಸಮಾಜ ಬಡತನದಿಂದ ಶಿಕ್ಷಣದಲ್ಲಿ ಕೊರೆತೆಯಿಂದ ಬಹಳ ಹಿಂದುಳಿದಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಶಿಕ್ಷಣಕ್ಕೆ ಪ್ರಥಮ ಪ್ರಾಶಸ್ತ್ಯವನ್ನು ನೀಡಿ ಮತ್ತು ನಿಮ್ಮ ಹಲವು ದಿನದ ಬೇಡಿಕೆಗಳಲ್ಲಿ ಒಂದಾದ ಪಿ.ಯು ಕಾಲೇಜು ಸ್ಥಾಪನೆಗೆ  ಸಚಿವ ಸೀತರಾಮ್, ಮಾನ್ಯ ಸಂಸದ ದ್ರುವ್‍ನಾರಯಣ್  ಮತ್ತು ಶಾಸಕ ನರೇಂದ್ರ ಪರಿಶ್ರಮದಿಂದ ಕಡತ ಸರ್ಕಾರದ ಹಂತದಲ್ಲಿದ್ದೂ, ಶೀಘ್ರದಲ್ಲಿ ಕಾಲೇಜು ಕೂಡ ಮಂಜೂರಾಗುತ್ತದೆ ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಶಾಸಕ ಆರ್ ನರೇಂದ್ರರಾಜೂಗೌಡ , ಜಿಲ್ಲಾ ಪಂಚಾಯತ್ ಸದಸ್ಯರಾದ ಮಂಜುಳಾರಂಗಸ್ವಾಮಿ, ಬಸವರಾಜು ಲೇಖಾರವಿಕುಮಾರ್ , ತಾಲ್ಲೂಕು ಪಂಚಾಯತ್ ಅದ್ಯಕ್ಷರಾದ ರಾಜು, ಗ್ರಾ.ಪಂ. ಅದ್ಯಕ್ಷ ರಾಜು, ಗ್ರಾಪಂ ಅದ್ಯಕ್ಷರಾಧ ಮಮಬೆಟ್ಟ ಪ್ರಾದಿಕಾರದ ನಾಮನೀರ್ದಶಕರಾದ ಕೊಪ್ಪಾಳಿನಾಯಕ , ಪುಟ್ಟರಾಜು ಮುಖಂಡರಾದ ಗೋಪಾಲ್ ಕೃಷ್ಣ, ರಂಗಸ್ವಾಮಿ , ಮಹದೇವ್  ಇನ್ನಿತರರು ಹಾಜರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News