×
Ad

ಹನೂರು : ಯಾತ್ರಿ ನಿವಾಸದ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ

Update: 2018-03-01 23:08 IST

ಹನೂರು,ಮಾ.1 : ನಮ್ಮ ದೇಶಕ್ಕೆ ಬುದ್ದ ಶಾಂತಿ ಸಂದೇಶ ಪ್ರಸ್ತುತವಾಗಿದ್ದು, ಈ ನಿಟ್ಟಿನಲ್ಲಿ ನಾವೆಲ್ಲ ಶಾಂತಿ ಸೌಹರ್ದತೆಯಿಂದ ಬಾಳಬೇಕಾಗಿದೆ ಎಂದು ಜೇತಾವನ ಬೌದ್ಧ ವಿಹಾರದ ಮನೋರಖ್ಖಿತ ಬಂತೇಜಿ ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯ ಚೆನ್ನಲಿಂಗನಹಳ್ಳಿಯ (ಮೋಡಳ್ಳಿ) ಗ್ರಾಮದ ಚೇತನವನದ ಬೌದ್ದವಿಹಾರದ ಹತ್ತಿರ ಪ್ರವಾಸೋದ್ಯಮ ಇಲಾಖೆಯ ವತಿಯಿಂದ 2017-2018ರ ಬಂಡವಾಳ ವೆಚ್ಚ ಲೆಕ್ಕ ಶೀರ್ಷಿಕೆಯಡಿ ಮಂಜೂರಾದ ಸುಮಾರು 50 ಲಕ್ಷ ವೆಚ್ಚದಲ್ಲಿ ಯಾತ್ರಿ ನಿವಾಸದ ಕಟ್ಟಡ ಕಾಮಗಾರಿಯನ್ನು ಶಂಕುಸ್ಥಾಪನೆಯನ್ನು ನೇರವೇರಿಸಿ ಮಾತನಾಡಿದ ಅವರು, ಭಗವಾನ್ ಬುದ್ದರ ತತ್ವದರ್ಶಗಳು ಸಾರ್ವಕಾಲಿಕ ಶ್ರೇಷ್ಟವಾದವುಗಳು. ಅವರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುನ್ನಡೆಯಬೇಕು ಎಂದು ತಿಳಿಸಿದರು.

ಮಾನ್ಯ ಸಂಸದರು ಮತ್ತು ಶಾಸಕರು  ಬೌದ್ದ ವಿಹಾರದ ಹತ್ತಿರ ಸುಸರ್ಜಿತ ಯಾತ್ರಿ ನಿವಾಸದ ಜೊತೆಗೆ ಬೌದ್ದ ವಿಹಾರ ನಿರ್ಮಾಣಕ್ಕೆ ಒತ್ತು ಕೂಟ್ಟು ನಿರ್ಮಾಣಕ್ಕೆ ಚಾಲನೆ ನೀಡಿರುವುದು ತುಂಬಾ ಹರ್ಷದಾಯಕವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸಂಸದ ಆರ್ ದ್ರುವ್‍ನಾರಯಣ್, ಶಾಸಕ ಆರ್ ನರೇಂದ್ರರಾಜೂಗೌಡ, ಬಸವರಾಜು ತಾಲ್ಲೂಕು ಪಂಚಾಯತ್ ಅದ್ಯಕ್ಷರಾದ ರಾಜು, ಗ್ರಾಪಂ ಅದ್ಯಕ್ಷ ರಾಜ , ಮಮಬೆಟ್ಟ ಪ್ರಾದಿಕಾರದ ನಾಮನೀರ್ದಶಕರಾದ ಕೊಪ್ಪಾಳಿನಾಯಕ  ಪ್ರವಾಸೋದ್ಯಮ ಸಹಾಯಕ ನೀರ್ದಶಕರಾದ ಜನಾರ್ದನ್  ತೇಜ್‍ಪಾಲ್ ,ಭೂಸೇನಾ ನಿಗಮದ ಇಲಾಖೆಯ ಅಧಿಕಾರಿಗಳು ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News