ಮಂಡ್ಯ : ಮತ್ತೆ ಎರಡು ಪೆಲಿಕಾನ್ ಅಸ್ವಸ್ಥ
Update: 2018-03-01 23:16 IST
ಮಂಡ್ಯ, ಮಾ.1: ಮದ್ದೂರು ತಾಲೂಕು ಕೊಕ್ಕರೆಬೆಳ್ಳೂರಿನ ಪಕ್ಷಿಧಾಮದಲ್ಲಿ ಮತ್ತೆರಡು ಪೆಲಿಕಾನ್‍ಗಳು ಅಸ್ವಸ್ಥಗೊಂಡು ಮರದಿಂದ ಕೆಳಗೆ ಬಿದ್ದಿದ್ದು, ಹೆಜ್ಜಾರ್ಲೆ ಬಳಗದವರು ಶುಷ್ರೂಷೆ ಮಾಡುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ಸುಮಾರು 32 ಪೆಲಿಕಾನ್‍ಗಳು ಸಾವಿಗೀಡಾಗಿವೆ. ಒಂದು ವಾರದಿಂದ ಯಾವುದೇ ಪೆಲಿಕಾನ್ ಅಸ್ವಸ್ಥಗೊಂಡಿರಲಿಲ್ಲ. ಮಂಗಳವಾರ ಮತ್ತೆ ಎರಡು ಅಸ್ವಸ್ಥಗೊಂಡಿರುವುದು ಆತಂಕ ಉಂಟುಮಾಡಿದೆ.
ವಿದೇಶಿ ಪೆಲಿಕಾನ್‍ಗಳು ಮಾತ್ರ ಅಸ್ವಸ್ಥಗೊಂಡು ಸಾಯುತ್ತಿವೆ. ಇದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಸರಕಾರ ಗಮನಹರಿಸಬೇಕು ಎಂದು ಪಕ್ಷಿ ಹಾರೈಕೆ ಮಾಡಿದ ಹೆಜ್ಜಾರ್ಲೆ ಬಳಗದ ಅಧ್ಯಕ್ಷ ಲಿಂಗೇಗೌಡ ಒತ್ತಾಯಿಸಿದ್ದಾರೆ.