ಹರ್ಮನ್ ಪ್ರೀತ್ ಡಿವೈಎಸ್ಪಿ..!
Update: 2018-03-01 23:38 IST
ಭಾರತದ ಮಹಿಳಾ ಟ್ವೆಂಟಿ-20 ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಪಂಜಾಬ್ ಪೊಲೀಸ್ ಇಲಾಖೆಗೆ ಪೊಲೀಸ್ ಉಪಾಧೀಕ್ಷಕರಾಗಿ (ಡಿವೈಎಸ್ಪಿ) ಸೇರ್ಪಡೆಗೊಂಡಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹಾಗೂ ಪೊಲೀಸ್ ಪ್ರಧಾನ ನಿರ್ದೇಶಕ(ಡಿಜಿಪಿ)ಸುರೇಶ್ ಅರೋರ ಅವರು ಕೌರ್ ಸಮವಸ್ತ್ರಕ್ಕೆ ಸ್ಟಾರ್ಸ್ ಗಳನ್ನು ಪೋಣಿಸಿ ಪೊಲೀಸ್ ಇಲಾಖೆಗೆ ಸ್ವಾಗತಿಸಿದರು.