×
Ad

ಈ ಚುನಾವಣೆ ಮೋದಿ-ಸಿದ್ದರಾಮಯ್ಯರ ಚುನಾವಣೆಯಂತೆ ಭಾಸವಾಗುತ್ತಿದೆ: ಪ್ರೊ.ಕೆ.ವಿ.ನಟರಾಜ್

Update: 2018-03-02 22:23 IST

ಮೈಸೂರು,ಮಾ.2: ರಾಜ್ಯಶಾಸ್ತ್ರ ವಿಭಾಗ,ಮೈಸೂರು ವಿಶ್ವವಿದ್ಯಾನಿಲಯ, ನಿರಂತರ ಫೌಂಡೇಶನ್,ಸಮಾಜಮುಖಿ ಮಾಸ ಪತ್ರಿಕೆ ಸಹಯೋಗದಲ್ಲಿ ಕಳೆದ ಐದು ವರ್ಷಗಳ ಕರ್ನಾಟಕದ ಸಾರ್ವಜನಿಕ ಜೀವನದ ಮೌಲ್ಯಮಾಪನ ಕುರಿತಾದ ಚರ್ಚೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಶುಕ್ರವಾರ ಮೈಸೂರಿನ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಸಮಾಜಮುಖಿ ಮಾಸ ಪತ್ರಿಕೆಯ ಮೂರನೇ ಸಂಚಿಕೆಯನ್ನು ಔಟ್ ಲುಕ್ ಪತ್ರಿಕೆಯ ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್ ಹಾಗೂ ಮೈಸೂರು ವಿವಿಯ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ವಿ.ಕೆ.ನಟರಾಜ್ ಬಿಡುಗಡೆಗೊಳಿಸಿದರು.

ಬಳಿಕ ಪ್ರೊ.ವಿ.ಕೆ.ನಟರಾಜ್ ಮಾತನಾಡಿ ನಾನು ಕಂಡ 40 ವರ್ಷಗಳ ಹಿಂದಿನ ಚುನಾವಣೆಗೂ ಈಗ ಇರೋ ಚುನಾವಣೆಗೂ ತುಂಬಾನೇ ವ್ಯತ್ಯಾಸ ಇದೆ.ಈ ಚುನಾವಣೆ ಮೋದಿ /ಸಿದ್ದರಾಮಯ್ಯನವರ ಚುನಾವಣೆಯಂತೆ ಬಾಸವಾಗುತ್ತಿದೆ. ಕಾಂಗ್ರೆಸ್ ಪಕ್ಷದ ಹತೋಟಿಯಲ್ಲಿರೋದು ಕರ್ನಾಟಕ ಒಂದೇನೆ. ಕಾಂಗ್ರೆಸ್ ಗೆ ಅದು ಅನುಕೂಲವೂ ಹೌದು,ಅನಾನುಕೂಲವೂ ಹೌದು. ಕಾಂಗ್ರೆಸ್ ಪಕ್ಷಕ್ಕೆ ಬೇರೆ ಕಡೆ ಬರ ಇದೆ ಎಂದರು. ಕರ್ನಾಟಕದಲ್ಲಿ ಕಳೆದ ಐದು ವರ್ಷಗಳ ಆಡಳಿತದಲ್ಲಿ ಮಾನವರ ಮುಖ್ಯವಾದ ಮೌಲ್ಯವೇ ಕಳೆದುಹೋಗಿದೆ. ನರೇಂದ್ರ ಮೋದಿ/ಸಿದ್ದರಾಮಯ್ಯ ಪೈಪೋಟಿ ಹೇಗಿದೆ ಅಂದರೆ ಪ್ರಜಾಪ್ರಭುತ್ವ ಸರ್ವಾಧಿಕಾರ ಆಗಿದೆ ಎಂದರು. 

ಸಿದ್ದರಾಮಯ್ಯರವರ ಕಾಂಗ್ರೆಸ್ ಸರ್ಕಾರ ಮಲಗಿದಂತಿದೆ. ಎಲ್ಲಿ ನೋಡಿದರಲ್ಲಿ ಎಲ್ಲಾ ಜಾಹಿರಾತಿನಲ್ಲಿ ಸಿಎಂ ಪ್ರಚಾರ ಮಾಡುತ್ತಿದ್ದಾರೆ. 3,755 ಕೋಟಿ ಪ್ರಚಾರಕ್ಕೆ ಹಣ ವ್ಯಯ ಆಗುತ್ತಿದೆ. ಸಾಹಿತ್ಯ,ಕಲೆ,ಸಂಗೀತದ ಬಗ್ಗೆ ಯಾರಿಗೂ ಕಿಂಚಿತ್ತು ಅಭಿಮಾನ ಇಲ್ಲ. ಇಂದಿನ ರಾಜಕೀಯ ವ್ಯಕ್ತಿಗಳಿಗೆ ಭಾಷೆ ಕಡೆ ಗಮನವೇ ಇಲ್ಲ .ಮಾತಿನಲ್ಲಿ ಸ್ವಲ್ಪ ಕೂಡ ಹಿಡಿತ ಇಲ್ಲದ ಹಾಗೇ ಮಾತನಾಡುತ್ತಾರೆ. ಇವರೆಲ್ಲಾ ನಮ್ಮನ್ನು ಆಳುತ್ತಿರುವವರು. ಇದು ನಮ್ಮ ದುರಾದೃಷ್ಟ ಎಂದು ಬೇಸರ ವ್ಯಕ್ತಪಡಿಸಿದರು. ಎಲ್ಲರೂ ಪ್ರಶ್ನೆ ಮಾಡುವುದನ್ನು ಕಲಿಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಈ ಸಂದರ್ಭ ರಾಜ್ಯ ಶಾಸ್ತ್ರ ವಿಭಾಗ ಅಧ್ಯಕ್ಷ ಪ್ರೊ.ರಾಮಚಂದ್ರಪ್ಪ, ಪ್ರಸಾದ್ ಕುಂದೂರ್,  ಚಿಂತಕ ಕೆ.ಪಿ.ಸುರೇಶ್, ಚಂದ್ರೇಶ ಬಾಬು ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News