ಮಂಡ್ಯ: ಹಲ್ಲೆ ಆರೋಪ; ಅಧಿಕಾರಿಯ ಬಂಧನ
Update: 2018-03-02 22:34 IST
ಮಂಡ್ಯ, ಮಾ.2: ಮೇಲಾಧಿಕಾರಿ ಮೇಲೆ ಹಲ್ಲೆ ಯತ್ನ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಚನ್ನಿಗರಾಯಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಚನ್ನಿಗರಾಯಪ್ಪ ಅವರನ್ನು ಇಲಾಖೆ ಕೇಂದ್ರ ಕಚೇರಿಯ ವ್ಯವಸ್ಥಾಪಕ ಇಸ್ಲಾಮುದ್ದೀನ್ ಗದಿಯಾಳ್ ವರ್ಗಾವಣೆ ಮಾಡಿದ್ದು, ಗದಿಯಾಳೆ ಮೇಲೆ ಹಲ್ಲೆಗೆ ಚನ್ನಿಗರಾಯಪ್ಪ ಪ್ರಯತ್ನಿಸಿದ್ದರು.
ಫೆ.27ರಂದು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಚನ್ನಿಗರಾಯಪ್ಪ ವಿರುದ್ಧ ಗದಿಯಾಳ್ ವಿಧಾನಸೌಧ ಪೊಲೀಸರಿಗೆ ದೂರು ನೀಡಿದ್ದರು. ಶುಕ್ರವಾರ ಚನ್ನಿಗರಾಯಪ್ಪನನ್ನು ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆದೊಯ್ದರು ಎಂದು ತಿಳಿದು ಬಂದಿದೆ.