ಗುಂಡ್ಲುಪೇಟೆ: ಸಿರಿಯಾ ಮುಗ್ದ ಮಕ್ಕಳ ಮಾರಣ ಹೋಮ ಖಂಡಿಸಿ ಪ್ರತಿಭಟನೆ
Update: 2018-03-02 23:40 IST
ಗುಂಡ್ಲುಪೇಟೆ,ಮಾ.2: ಸಿರಿಯಾದಲ್ಲಿ ಮುಗ್ದ ಮಕ್ಕಳ ಮೇಲಿನ ಮಾರಣ ಹೋಮವನ್ನು ಖಂಡಿಸಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ವಿವಿಧ ರಸ್ತೆಗಳಲ್ಲಿ ಸಾಗಿ ಸಿರಿಯಾ ಹತ್ಯಾಕಾಂಡದ ವಿರುದ್ದ ಘೋಷಣೆ ಕೂಗಿದ ಪ್ರತಿಭಟನಾಕಾರರು ತಾಲೂಕು ಕಚೇರಿ ಎದುರು ಸಮಾವೇಶಗೊಂಡರು.
ಕೇಂದ್ರ ಸರ್ಕಾರ ಕೂಡಲೇ ಮಧ್ಯಸ್ಥಿಕೆ ವಹಿಸಿ ಸಿರಿಯಾದಲ್ಲಿ ನೆಲೆಸಿರುವ ಮುಸ್ಲಿಂ ಜನಾಂಗದವರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ವಿಶ್ವಸಂಸ್ಥೆಯು ಕೂಡಲೇ ಜನಾಂಗೀಯ ಹಿಂಸಾಚಾರ ನಿಲ್ಲಿಸಬೇಕು ಎಂದು ಒತ್ತಾಯಿಸಿದ ಮನವಿ ಪತ್ರವನ್ನು ತಹಸೀಲ್ದಾರ್ ಕೆ.ಸಿದ್ದು ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಮುಸ್ಲಿಂ ಜನಾಂಗದ ಮುಖಂಡರು ಭಾಗವಹಿಸಿದ್ದರು.