ಮಾದಕ ವಸ್ತು ಜಾಲದಲ್ಲಿ ಗೋವಾ

Update: 2018-03-03 04:06 GMT

ಪಣಜಿ, ಮಾ.3: ಗೋವಾದಲ್ಲಿ ಮಾದಕ ವಸ್ತು ಜಾಲ ವ್ಯಾಪಕವಾಗಿ ಹೆಚ್ಚುತ್ತಿದೆ. 2016ಕ್ಕೆ ಹೋಲಿಸಿದರೆ, 2017ರಲ್ಲಿ ಮಾದಕ ವಸ್ತು ಬಳಕೆ, ಸಾಗಣೆ, ಮಾರಾಟ ಸಂಬಂಧ ಪೊಲೀಸರು ದಾಖಲಿಸಿರುವ ಪ್ರಕರಣ ಶೇ.400ರಷ್ಟು ಹೆಚ್ಚಿರುವುದು ಇದನ್ನು ದೃಢಪಡಿಸುತ್ತವೆ. ಬಹುತೇಕ ಪ್ರಕರಣಗಳು 2017ರ ಕೊನೆಯ ಐದು ತಿಂಗಳಲ್ಲಿ ದಾಖಲಾಗಿವೆ.

ಈ ಐದು ತಿಂಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯ ಅನ್ವಯ 161 ಪ್ರಕರಣಗಳನ್ನು ದಾಖಲಿಸಿ, 172 ಮಂದಿ ಮಾದಕ ವಸ್ತು ಮಾರಾಟಗಾರರು ಹಾಗೂ ಡೀಲರ್‌ಗಳನ್ನು ಕಂಬಿಯೊಳಕ್ಕೆ ತಳ್ಳಿದ್ದಾರೆ.

ಮಾದಕ ವಸ್ತು ತಡೆ ಘಟಕದ ಪೊಲೀಸ್ ಅಧೀಕ್ಷಕ ಉಮೇಶ್ ಗಾಂವ್ಕರ್ ಹೇಳುವಂತೆ, "ಈ ಅವಧಿಯಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳ ಮೌಲ್ಯ 2.84 ಕೋಟಿ ರೂಪಾಯಿ. ಮಾದಕ ವಸ್ತು ಪ್ರಕರಣಗಳ ಹೆಚ್ಚಳಕ್ಕೆ ಪ್ರಮುಖ ಕಾರಣವೆಂದರೆ, ಸಿಎಂ ನಿರ್ದೇಶನದ ಬಳಿಕ ರಾಜ್ಯಾದ್ಯಂತ ಎಲ್ಲ ಪೊಲೀಸ್ ಠಾಣೆಗಳು ಮಾದಕವಸ್ತು ಜಾಲವನ್ನು ವಿಶೇಷ ಆದ್ಯತೆ ಮೇರೆಗೆ ಬೇಧಿಸಿದ್ದು"

ಬಂಧಿತ 172 ಮಂದಿಯ ಪೈಕಿ 60 ಮಂದಿ ಗೋವನ್ನರು ಹಾಗೂ 79 ಮಂದಿ ಇತರ ರಾಜ್ಯದವರು, 26 ಮಂದಿ ವಿದೇಶೀಯರು. ಎಎನ್‌ಸಿಯ ಐದು ವರ್ಷಗಳ ಅಂಕಿ ಅಂಶಗಳ ಪ್ರಕಾರ, ಮಾದಕ ವಸ್ತು ಜಾಲದಲ್ಲಿ ಬಂಧಿತರಾದ ಶೇಕಡ 80ರಷ್ಟು ಮಂದಿ ವಿದೇಶೀಯರು, ಅದರಲ್ಲೂ ಬಹುತೇಕರು ನೈಜೀರಿಯಾದವರು. ಗಾಂಜಾ, ಎಂಡಿಎಂಎ (ಮೆಥಿಲೆನೆಡಿಯೋಕ್ಸಿ ಮೆಥಾಂಪೆಥೆಮೈನ್), ಕೊಕೇನ್, ಚರಸ್, ಲೈಸರ್ಜಿಕ್ ಆಸಿಡ್ ಡಿಎಥಿಲಮೈಡ್, ಎಲ್‌ಎಸ್‌ಡಿ ಪೇಪರ್, ಹೆರಾಯಿನ್, ಆಂಪೆಥಮೈನ್, ಕೆಟಮಿನ್, ಡಿಮೆಥಿಲಟೈರಸ್‌ಪಟಮಿನ್ (ಡಿಎಂಟಿ) ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News