×
Ad

ತುಮಕೂರು: ಬಸ್- ಆಟೋ ಮುಖಾಮುಖಿ ಢಿಕ್ಕಿ; ಮೂವರು ಮೃತ್ಯು

Update: 2018-03-04 18:23 IST

ತುಮಕೂರು,ಮಾ.4: ಖಾಸಗಿ ಬಸ್ ಹಾಗೂ ಆಟೋ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಆಟೋದಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟು, ಓರ್ವ ಗಾಯಗೊಂಡ ಘಟನೆ ನಗರದ ಹೊರವಲಯದಲ್ಲಿರುವ ಬೆಳಗುಂಬದಲ್ಲಿ ನಡೆದಿದೆ.

ಮೃತರನ್ನು ಹನಮಂತಪುರದ ನಿವಾಸಿಗಳಾದ ಮಾರುತಿ ಮತ್ತು ದೀಪು, ಹಾಗೂ ನಜರಾಬಾದ್ ನಿವಾಸಿ ಶಬ್ಬಾಸ್ ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡ ವಸಂತಕುಮಾರ್ ಎಂಬವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಟೋದಲ್ಲಿದ್ದವರು ದೇವರಾಯನದುರ್ಗ ದಿಂದ ತುಮಕೂರು ನಗರಕ್ಕೆ ಬರುತ್ತಿದ್ದರು. ಖಾಸಗಿ ಬಸ್ ಊರ್ಡಿಗೆರೆ ಕಡೆ ಹೊರಟಿತ್ತು. ಬೆಳಗುಂಬದ ಕೆಂಪೇಗೌಡ ಕಾಲೇಜಿನ ಬಳಿ ಇರುವ ತಿರುವಿನಲ್ಲಿ ಪರಸ್ಪರ ವಾಹನ ಕಾಣದೇ ಇದ್ದುದರಿಂದ ಈ ಅಪಘಾತ ನಡೆದಿದೆ ಎನ್ನಲಾಗಿದೆ.

ಕ್ಯಾತಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News