×
Ad

ಆಶ್ರಯ ಮನೆಗಳ ಪಟ್ಟಿ ಸಲ್ಲಿಕೆಗೆ ಸಿ.ಟಿ.ರವಿ ನಿರ್ಲಕ್ಷ್ಯ: ಆರೋಪ

Update: 2018-03-04 19:46 IST

ಚಿಕ್ಕಮಗಳೂರು ಮಾ.4,  ನಗರದ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಕಲ್ಯಾಣನಗರ ಬಡಾವಣೆಯ ಆಶ್ರಯ ಮನೆಗಳ ನಿವಾಸಿಗಳ ಸಂಪೂರ್ಣ ಪಟ್ಟಿಯನ್ನು ಶಾಸಕ ಸಿ.ಟಿ.ರವಿ ಅವರು ತಕ್ಷಣ ರಾಜ್ಯ ಸರಕಾರಕ್ಕೆ ಸಲ್ಲಿಸಬೇಕು ಎಂದು ಆಶ್ರಯ ಸಮಿತಿ ಸದಸ್ಯ ತನ್ವೀರ್ ಅಹ್ಮದ್ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ರಾಜ್ಯ ಸರಕಾರ ಆಶ್ರಯ ಮನೆ ಫಲಾನುಭವಿಗಳ ಸಾಲಮನ್ನಾ ಯೋಜನೆಯನ್ನು ಜಾರಿಗೆ ತಂದಿದ್ದು, ಅದರಂತೆ ರಾಜ್ಯಾದ್ಯಂತ ಫಲಾನುಭವಿಗಳ ಸಾಲವನ್ನು ಮನ್ನಾ ಮಾಡಿ ಅವರಿಗೆ ತಿಳುವಳಿಕೆ ಪತ್ರವನ್ನು ಈಗಾಗಲೇ ನೀಡಿದೆ. ಶಾಸಕ ಸಿ.ಟಿ.ರವಿ ಅವರು ನಗರದ ನಗರ ಸಮೀಪದ ಗವನಹಳ್ಳಿಯ ಆಶ್ರಯಮನೆ  ಫಲಾನುಭವಿಗಳ ಪಟ್ಟಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿರುವುದರಿಂದ ಆ ಫಲಾನುಭವಿಗಳಿಗೆ ಸಾಲಮನ್ನಾ ತಿಳುವಳಿಕೆ ಪತ್ರವನ್ನು ಸರಕಾರ ನೀಡಿದೆ. ಆದರೆ ಇಂದಿರಾಗಾಂದಿ, ರಾಜೀವ್ ಗಾಂಧಿ ಮತ್ತು ಕಲ್ಯಾಣನಗರ ಬಡಾವಣೆಯ ಫಲಾನುಭವಿಗಳ ಸಾಲವನ್ನು ಮನ್ನಾ ಮಾಡಿದರೆ ಅದರ ಲಾಭ ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತದೆ ಎಂಬ ದುರುದ್ದೇಶದಿಂದ ಶಾಸಕ ಸಿ.ಟಿ.ರವಿ ಅವರು ಈ  ಬಡಾವಣೆಗಳ ಫಲಾನುಭವಿಗಳ ಪಟ್ಟಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸುತ್ತಿಲ್ಲ ಎಂದು ಅವರು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಶಾಸಕ ಸಿ.ಟಿ.ರವಿಯವರು ಬಡವರ ಬದುಕಿನ ವಿಷಯದಲ್ಲಿ ಚೆಲ್ಲಾಟವಾಡುವುದನ್ನು ಬಿಡಬೇಕು. ಇಂದಿರಾಗಾಂಧಿ, ರಾಜೀವ್‍ಗಾಂಧಿ ಮತ್ತು ಕಲ್ಯಾಣನಗರದ ಆಶ್ರಯ ಮನೆ ಫಲಾನುಭವಿಗಳಿಗೂ ಸಾಲಮನ್ನಾ ತಿಳುವಳಿಕೆ ಪತ್ರ ದೊರಕಿಸಿ ಕೊಡುವ ನಿಟ್ಟಿನಲ್ಲಿ ಆ ಫಲಾನುಭವಿಗಳ ಸಂಪೂರ್ಣ ಪಟ್ಟಿಯನ್ನೂ ತಕ್ಷಣ ರಾಜ್ಯ ಸರಕಾರಕ್ಕೆ ಸಲ್ಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News