×
Ad

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ ವನಮಾಲಾ ಆಯ್ಕೆ

Update: 2018-03-04 20:46 IST

ಬೆಂಗಳೂರು, ಮಾ. 4: ಕರ್ನಾಟಕ ಲೇಖಕಿಯರ ಸಂಘದ ನೂತನ ಅಧ್ಯಕ್ಷರಾಗಿ ಲೇಖಕಿ ವನಮಾಲಾ ಸಂಪನ್ನ ಕುಮಾರ್ ಅವರು ಆಯ್ಕೆಯಾಗಿದ್ದಾರೆ.
ಲೇಖಕಿಯರ ಸಂಘದ ತ್ರೈವಾರ್ಷಿಕ ಚುನಾವಣೆಯಲ್ಲಿ ಒಟ್ಟು 379 ಮತಗಳು ಚಲಾವಣೆಯಾಗಿದ್ದು, ಆಪೈಕಿ 198 ಮತಗಳು ವನಮಾಲಾ ಸಂಪನ್ನ ಕುಮಾರ್ ಅವರಿಗೆ ಬಂದಿದ್ದು, ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

ವನಮಾಲಾ ಅವರ ಪ್ರತಿಸ್ಪರ್ಧಿ ಪತ್ರಕರ್ತೆ ಡಾ.ಆರ್.ಪೂರ್ಣಿಮಾ ಅವರಿಗೆ 178 ಮತಗಳು ಲಭಿಸಿವೆ. 20 ಮತಗಳ ಅಂತರದಿಂದ ವನಮಾಲಾ ಸಂಪನ್ನ ಕುಮಾರ್ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ 191 ಮಂದಿ ಮತ ಚಲಾಯಿಸಿದ್ದಾರೆ. ಅಂಚೆ ಮೂಲಕ 188 ಮತಗಳು ಬಂದಿದ್ದು, 3ಮತಗಳು ಅಮಾನ್ಯಗೊಂಡಿವೆ.

ಲೇಖಕಿ ಅಂಜಲಿ ರಾಮಣ್ಣ ಅವರು ಚುನಾವಣಾಧಿಕಾರಿಯಾಗಿ ಕರ್ನಾಟಕ ಲೇಖಕಿಯರ ಸಂಘದ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು ಎಂದು ಲೇಖಕಿಯರ ಸಂಘದ ನಿಕಟಪೂರ್ವ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News